ಬಂಡೀಪುರದಲ್ಲಿ ಪ್ರಧಾನಿ ಸಫಾರಿ; ಫೋಟೋಗಳಿವೆ
ಮೈಸೂರು; ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದರು. ಒಂದೂವರೆ ಗಂಟೆ ಕಾಲ ಸಫಾರಿ ನಡೆಸಿದ ಅವರು, ಹಲವು ಪ್ರಾಣಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
೨೦ ಕಿಲೋ ಮೀಟರ್ ವರೆಗೆ ಪ್ರಧಾನಿ ಮೋದಿ ಕಾಡಿನಲ್ಲಿ ಓಡಾಡಿದ್ದಾರೆ. ಈ ವೇಳೆ ಅವರು ಖಾಕಿ ಬಣ್ಣದ ಪ್ಯಾಂಟ್, ಅರಣ್ಯ ಇಲಾಖೆ ಜಾಕೆಟ್ ಧರಿಸಿದ್ದರು.
ಸಫಾರಿ ವೇಳೆ ತೆಗೆದ ಅವರ ಫೋಟೋಗಳು ಹಾಗೂ ಪ್ರಧಾನಿ ಮೋದಿ ಸೆರೆ ಹಿಡಿದ ಫೋಟೋಗಳು ವೈರಲ್ ಆಗುತ್ತಿವೆ.