CinemaHealth

ಖ್ಯಾತ ನಟಿ ಖುಷ್ಬೂಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

ಹೈದರಾಬಾದ್‌; ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅನಾರೋಗ್ಯಕ್ಕೀಡಾಗಿದ್ದಾರೆ. ಜ್ವರ ಹಾಗೂ ತೀವ್ರ ಸುಸ್ತಿನಿಂದ ಬಳಲುತ್ತಿರುವ ಅವರು, ಹೈದರಾಬಾದ್‌ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಖುಷ್ಬೂ ಅವರೇ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಪರೀತ ಜ್ವರ ಕಾಡುತ್ತಿದೆ. ಜೊತೆಗೆ ವೀಕ್‌ನೆಸ್‌ ಕೂಡಾ ಇದೆ ಎಂದು ಖುಷ್ಬೂ ಹೇಳಿಕೊಂಡಿದ್ದಾರೆ. ನಾನು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಸೇರಿದ್ದೇನೆ. ಚೇತರಿಸಿಕೊಳ್ಳುತ್ತಿದ್ದೇನೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದೂ ಖುಷ್ಬೂ ಹೇಳಿಕೊಂಡಿದ್ದಾರೆ.

 

Share Post