ರೌಡಿ ಶೀಟರ್ ಅಂಡ್ ಟೀಂ ಜೊತೆ ಕಾಗೇರಿ ಗುಪ್ತ ಸಭೆ; ಫೋಟೋ ವೈರಲ್
ಉತ್ತರ ಕನ್ನಡ; ರೌಡಿ ಶೀಟರ್ ಫಯಾಜ್ ಚೌಟಿ ಹಾಗೂ ಆತನ ಬೆಂಬಲಿಗರ ಜೊತೆ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗುಪ್ತ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಫೋಟೋವೊಂದು ಹರಿದಾಡುತ್ತಿದೆ. ಈ ಸಭೆ ಯಾವಾಗ ನಡೆಲಾಯಿತು, ಯಾಕೆ ನಡೆಸಲಾಯಿತು ಎಂಬುದರ ಬಗ್ಗೆ ರಾಜಕೀಯವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರೌಡಿ ಶೀಟರ್ ಫಯಾಜ್, ದರೋಡೆ, ಬ್ಲ್ಯಾಕ್ಮೇಲ್, ವಂಚನೆ, ಅಪಹರಣ ಸೇರಿ ಹಲವು ಆರೋಪಗಳನ್ನು ಹೊತ್ತಿದ್ದಾನೆ. ಭೂಗತ ಪಾತಕಿ ಹೆಬ್ಬಟ್ಟು ಮಂಜು ಸೇರಿ ಹಲವು ರೌಡಿಗಳ ಜೊತೆ ಈತನ ಸಂಪರ್ಕ ಇದೆಯಂತೆ. ಈತನ ವಿರುದ್ಧ ಹದಿನೇಳಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈತನ ಜೊತೆ ಕಾಗೇರಿ ಯಾಕೆ ಮಾತುಕತೆ ನಡೆಸಿದರು ಎಂಬ ಪ್ರಶ್ನೆ ಎದ್ದಿದೆ.
5 ದಿನಗಳ ಹಿಂದೆ ಗುಪ್ತವಾಗಿ 50ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಾಗೇರಿ ಕಚೇರಿಯಲ್ಲಿಯೇ ರೌಡಿಶೀಟರ್ ಫಯಾಜ್ ಈ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾಗೇರಿ ಕಚೇರಿ ಮೂಲಗಳು ಹೇಳುವ ಪ್ರಕಾರ ಫಯಾಜ್ ಕ್ಷೇತ್ರದ ಸಮಸ್ಯೆಯೊಂದರ ಬಗ್ಗೆ ಕಾಗೇರಿ ಬಳಿ ಚರ್ಚೆಗೆ ಬಂದಿದ್ದ ಎನ್ನಲಾಗಿದೆ.