DistrictsPolitics

ಕನ್ನಡವನ್ನು ಹಾಡಿಹೊಗಳಿದ ಮೋದಿ; ಭಾವನಾತ್ಮಕ ವಿಚಾರ ವರ್ಕೌಟ್‌ ಆಗುತ್ತಾ..?

ಚಿಕ್ಕಬಳ್ಳಾಪುರ; ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಕನ್ನಡದಲ್ಲಿ ಮಾತು ಶುರು ಮಾಡುತ್ತಿದ್ದರು. ಆದ್ರೆ ಈ ಬಾರಿ ಇನ್ನೂ ಸ್ವಲ್ಪ ಮುಂದೆ ಹೋಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕನ್ನಡ ಭಾಷೆಯನ್ನು ಹಾಡಿಹೊಗಳಿದ್ದಾರೆ. ಮುದ್ದೇನಹಳ್ಳಿಯಲ್ಲಿ ಶ್ರೀ ಮಧುಸೂದನ್ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ & ರಿಸರ್ಚ್ ಸಂಸ್ಥೆ ಉದ್ಘಾಟನೆ ಮಾಡಿ ಮೋದಿಯವರು ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಅವರು ಮಾತನಾಡಿದಂತಿತ್ತು.

ಕನ್ನಡಿಗರು ಭಾವನಾತ್ಮಕ ಜೀವಿಗಳು. ಅದೂ ಕೂಡಾ ನೆಲ, ಜಲ, ಭಾಷೆಗಾಗಿ ಪ್ರಾಣವನ್ನೂ ಕೊಡುವವರಿದ್ದಾರೆ. ಇದನ್ನು ಅರಿತೇ ಪ್ರಧಾನಿ ಮೋದಿಯವರನ್ನು ಕನ್ನಡವನ್ನು ಹಾಡಹೊಗಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಷಣ ಶುರು ಮಾಡುತ್ತಿದ್ದಂತೆ ಮೋದಿಯವರು ಎಂದಿನಂತೆ ಕನ್ನಡದಲ್ಲಿ ಮಾತು ಆರಂಭಿಸಿದರು. ನಂತರ ಕನ್ನಡ ಭಾಷೆ ಹಾಗೂ ಕನ್ನಡಿಗರನ್ನು ಹೊಗಳಲು ಶುರು ಮಾಡಿದರು.

ಕನ್ನಡ ಭಾಷೆ ದೇಶದಲ್ಲಿ ಸಮೃದ್ಧ ಭಾಷೆ. ಕನ್ನಡದಲ್ಲೂ ಮೆಡಿಕಲ್‌ ಶಿಕ್ಷಣ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕನ್ನಡ ಭಾಷೆಯ ಸೊಗಡನ್ನು ಹೊಗಳುವ ಮೂಲಕ ಕನ್ನಡಿಗರನ್ನು ಭಾವನಾತ್ಮಕವಾಗಿ ಸೆಳೆಯೋ ಪ್ರಯತ್ನ ಮಾಡಿದ್ದಾರೆ. ಇನ್ನು ಬಿಜೆಪಿ ಸರ್ಕಾರ ಬಡವರ ಸೇವೆಗೆ ಸದಾ ಸಿದ್ಧವಾಗಿದೆ. ಬಡವರಿಗಾಗಿ ನಾವು ಜನೌಷಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ. ಬಡ ಜನರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇವೆ ಎಂದೂ ಮೋದಿಯವರು ಹೇಳಿದ್ದಾರೆ.

Share Post