BengaluruCinema

ವೀರಸಾವರ್ಕರ್‌ ಸಿನಿಮಾ; ಸಾವರ್ಕರ್‌ ಪತ್ನಿಯಾಗಿ ಸನಾದಿ ಅಪ್ಪಣ್ಣನ ಮರಿಮೊಮ್ಮಗಳು

ಬೆಂಗಳೂರು; ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶನದಲ್ಲಿ ವೀರ ಸಾವರ್ಕರ್‌ ಸಿನಿಮಾ ಬರುತ್ತಿದೆ. ಇದರಲ್ಲಿ ಸಾವರ್ಕರ್‌ ಪತ್ನಿ ಯಮುನಾ ಆಗಿ ಸನಾದಿ ಅಪ್ಪಣ್ಣ ಅವರ ಮರಿಮೊಮ್ಮಗಳು ನಟಿಸುತ್ತಿದ್ದಾರೆ. ಖ್ಯಾತ ಸನಾದಿ ವಾದಕ ಸನಾದಿ ಅಪ್ಪಣ್ಣನ ಮರಿಮೊಮ್ಮಗಳು ಜಾಹ್ನವಿಕ ಈಗಾಗಲೇ ಪ್ರಾರಂಭ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ವೀರ ಸಾವರ್ಕರ್‌ ಸಿನಿಮಾದಲ್ಲಿ ಸಾವರ್ಕರ್‌ ಪತ್ನ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

ಸನಾದಿ ಅಪ್ಪಣ್ಣರ ಮೊಮ್ಮಗ ಪ್ರಭಾಕರ್‌ ಅವರ ಪುತ್ರಿ ಜಾಹ್ನವಿಕ. ಸಾವರ್ಕರ್ ಪಾತ್ರಕ್ಕೆ ನಟ ಸುನೀಲ್ ರಾವ್ ರನ್ನು ಆಯ್ಕೆ ಮಾಡಲಾಗಿದೆ. ಈ ಸಿನಿಮಾದಲ್ಲಿನ ಪ್ರಮುಖ ಪಾತ್ರಕ್ಕೆ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕರೆಸುವ ಸಾಧ್ಯತೆ ಇದೆ. ಇದಕ್ಕಾಗಿಯೇ ನಿರ್ದೇಶಕರು ಮುಂಬೈಗೆ ಹೋಗಿದ್ದಾರೆ.

Share Post