ಚಾಮುಂಡಿಯಾಣೆ ನಾನು ಅಭಿಷೇಕ್ಗೆ ಟಿಕೆಟ್ ಕೇಳಿಲ್ಲ; ಸಂಸದೆ ಸುಮಲತಾ ಅಂಬರೀಶ್
ಮಂಡ್ಯ; ಬಿಜೆಪಿಗೆ ಬೆಂಬಲ ಘೋಷಿಸಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು, ನಾನು ಕುಟುಂಬ ರಾಜಕಾರಣ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪುತ್ರ ಅಭಿಷೇಕ್ ಅಂಬರೀಶ್ ಅವರನ್ನು ರಾಜಕಾರಣಕ್ಕೆ ತರಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಸುಮಲತಾ ಅವರು, ಚಾಮುಂಡಿ ಮೇಲಾಣೆ ನಾನು ಅಭಿಷೇಕ್ಗೆ ಟಿಕೆಟ್ ಕೇಳಿಲ್ಲ ಎಂದು ಹೇಳಿದ್ದಾರೆ.
ನಾನು ರಾಜಕಾರಣದಲ್ಲಿರುವವರೆಗೂ ಅಭಿಷೇಕ್ ಯಾವ ಕಾರಣಕ್ಕೂ ರಾಜಕೀಯಕ್ಕೆ ಬರೋದಿಲ್ಲ. ಅಭಿಷೇಕ್ಗೆ ಎರಡು ಪಕ್ಷಗಳಿಂದ ಆಹ್ವಾನ ಬಂದಿತ್ತು. ಟಿಕೆಟ್ ನೀಡೋದಾಗಿ ಆಹ್ವಾನಿಸಿದ್ದರು. ಆದ್ರೆ ಅಭಿಷೇಕ್ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂದು ಸುಮಲತಾ ಇದೇ ವೇಳೆ ಹೇಳಿದ್ದಾರೆ.