CinemaHealth

ಶೂಟಿಂಗ್‌ ವೇಳೆ ಅಮಿತಾಬ್‌ಗೆ ಗಾಯ; ಚಿತ್ರೀಕರಣ ಸ್ಥಗಿತ

ಹೈದರಾಬಾದ್‌; ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್‌ ಕೆ ಚಿತ್ರದ ಶೂಟಿಂಗ್‌ ವೇಳೆ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ಗೆ ಗಾಯವಾಗಿದೆ. ಶೂಟಿಂಗ್‌ ವೇಳೆ ಬಿದ್ದಿದ್ದರಿಂದ ಅವರ ಪಕ್ಕೆಲುಬು ಮುರಿದಿದೆ. ಈ ಹಿನ್ನೆಲೆಯಲ್ಲಿ ಅವರು ಎಐಜಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ನಿನ್ನೆ ಈ ಘಟನೆ ನಡೆದಿದ್ದು, ಅಮಿತಾಬ್‌ ಅವರೇ ಈ ಬಗ್ಗೆ ಬರೆದುಕೊಂಡಿದ್ದಾರೆ.

ವೈದ್ಯರು ಸಿಟಿ ಸ್ಕ್ಯಾನ್‌ ಮಾಡಿದಾಗ ಪಕ್ಕೆಲುಬು ಮುರಿದಿರುವುದು ಗೊತ್ತಾಗಿದೆ. ಈ ಕಾರಣದಿಂದಾಗಿ ಶೂಟಿಂಗ್‌ ನಿಲ್ಲಿಸಲಾಗಿದೆ. ಅಮಿತಾಬ್‌ ಅವರಿಗೆ ಒಂದೆರಡು ವಾರ ರೆಸ್ಟ್‌ ಬೇಕಾಗಿದೆ ಅಷ್ಟೇ. ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಅಮಿತಾಬ್‌ ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಮುಂಬೈಗೆ ಶಿಫ್ಟ್‌ ಆಗಿದ್ದಾರೆ. ಮುಂಬೈನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ತಜ್ಞ ವೈದ್ಯರು ಅಲ್ಲಿಗೇ ಬಂದು ಚಿಕಿತ್ಸೆ ನೀಡುತ್ತಿದ್ದಾರೆ.

ಒಂದೆರಡು ವಾರದಲ್ಲಿ ಗುಣಮುಖನಾಗುತ್ತೇನೆ. ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಹೀಗಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದೇನೆ. ಸಂಪೂರ್ಣ ಗುಣಮುಖನಾದ ನಂತರ ಮತ್ತೆ ಶೂಟಿಂಗ್‌ನಲ್ಲಿ ಭಾಗವಹಿಸುತ್ತೇನೆ ಎಂದು ಅಮಿತಾಬ್‌ ಹೇಳಿದ್ದಾರೆ.

Share Post