ಎಎಪಿ ಬಿಟ್ಟು ಬಿಜೆಪಿ ಸೇರಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್
ಬೆಂಗಳೂರು; ಚುನಾವಣೆ ಹೊಸ್ತಿಲಲ್ಲೇ ರಾಜ್ಯದಲ್ಲಿ ಎಎಪಿಗೆ ಹಿನ್ನಡೆಯಾಗಿದೆ. ಎಎಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ನಿವೃತ್ತಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಪಕ್ಷ ತೊರೆದಿದ್ದಾರೆ. ಇಂದು ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಭಾಸ್ಕರ್ ರಾವ್ ಅವರು ಎಎಪಿ ಸೇರಿದ್ದಾರೆ.
ಇದೇ ವೇಳೆ ಮಾತನಾಡಿದ ಭಾಸ್ಕರ್ ರಾವ್ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿದೆ. ಬಿಜೆಪಿ ಪಕ್ಷ ಜನರ ಆಶಾಕಿರಣವಾಗಿದ್ದು, ಅದರ ಸಿದ್ದಾಂತಗಳಿಗೆ ಮಾರುಹೋಗಿ ಬಿಜೆಪಿ ಸೇರಿದ್ದೇನೆ ಎಂದರು. ಬಹಳ ನಿರೀಕ್ಷೆ ಇಟ್ಟುಕೊಂಡು ಎಎಪಿ ಪಕ್ಷಕ್ಕೆ ನಾನು ಸೇರ್ಪಡೆಯಾಗಿದ್ದೆ. ಆದ್ರೆ ಆ ಪಕ್ಷದ ಕಾರ್ಯವೈಖರಿ ತುಂಬಾನೇ ಭಿನ್ನವಾಗಿದೆ. ಎಎಪಿ ಪಕ್ಷ ರಾಜ್ಯದಲ್ಲಿ ಯಾವ ರೀತಿ ಬೆಳೆಯಬೇಕಿತ್ತೋ ಅದು ಆಗುತ್ತಿಲ್ಲ. ಹೀಗಾಗಿ ಎಎಪಿ ತೊರೆಯಬೇಕಾಯ್ತು ಎಂದೂ ಭಾಸ್ಕರ್ ರಾವ್ ಹೇಳಿದ್ದಾರೆ.