ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸದ್ಯಕ್ಕೆ ಟೋಲ್ ಸಂಗ್ರಹವಿಲ್ಲ; ಸಂಸದ ಪ್ರತಾಪ ಸಿಂಹ
ಮೈಸೂರು; ಬೆಂಗಳೂರು ಹಾಗೂ ಮೈಸೂರು ಎಕ್ಸ್‌ಪ್ರೆಸ್ ಹೈ ವೇ ಟೋಲ್ ಸಂಗ್ರಹ ಸದ್ಯಕ್ಕಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅವರು, ಟೋಲ್ ಸಂಗ್ರಹ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ 1 ಅಂದರೆ ನಾಳೆಯಿಂದ ಟೋಲ್ ಸಂಗ್ರಹಕ್ಕೆ ಸೂಚಿಸಲಾಗಿತ್ತು. 135 ರೂಪಾಯಿಯಿಂದ 880 ರೂಪಾಯಿ ತನಕ ಟೋಲ್ ಸಂಗ್ರಹಕ್ಕೆ ಬೆಲೆ ನಿಗದಿ ಮಾಡಲಾಗಿತ್ತು. ಆದ್ರೆ ಸರ್ವೀಸ್ ರಸ್ತೆ ನಿರ್ಮಾಣ ಇನ್ನೂ ಪೂರ್ತಿಯಾಗಿಲ್ಲ. ಹೀಗಿರುವಾಗ ಹೇಗೆ ಟೋಲ್ ಸಂಗ್ರಹ ಮಾಡುತ್ತೀರಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ವಿವಿಧ ಸಂಘಟನೆಗಳು ಕೂಡಾ ಟೋಲ್ ವಿರುದ್ಧ ಧ್ವನಿ ಎತ್ತಿದ್ದವು. ಈ ಕಾರಣಕ್ಕಾಗಿ ನಾಳೆಯಿಂದ ಟೋಲ್ ಸಂಗ್ರಹ ಇಲ್ಲ ಎಂದು ಸಂಸದರು ಹೇಳಿದ್ದಾರೆ.