ಆದಿಲ್‌ಗೆ ನನಗಿಂತ ಹಾಟ್ ಹುಡುಗಿ ಬೇಕಾ..?; ರಾಖಿ ಸಾವಂತ್ ಪ್ರಶ್ನೆ
ಮುಂಬೈ; ಆದಿಲ್‌ಗೆ ನನಗಿಂತ ಹಾಟ್ ಹುಡುಗಿ ಬೇಕಾ..? ನನ್ನಂತ ಹಾಟ್ ಪತ್ನಿಯನ್ನು ಬಿಟ್ಟು ಅವನು ಬೇರೆಡೆ ಹೋಗಿದ್ದಾನೆ ಎಂದು ನಟಿ ರಾಖಿ ಸಾವಂತ್ ಗೋಳು ತೋಡಿಕೊಂಡಿದ್ದಾರೆ. ದುಬೈನಲ್ಲಿ ರಾಖಿ ಫೌಂಡೇಶನ್ ಉದ್ಘಾಟನೆಯಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮೊದಲ ವಿಮಾನ ನಿಲ್ದಾಣದಲ್ಲಿ ಅವರು ಮಾತನಾಡಿದರು.
ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಕಾರಣಕ್ಕೆ ರಾಖಿ ಸಾವಂತ್ ತಮ್ಮದೇ ಹೆಸರಿನಲ್ಲಿ ಫೌಂಡೇಶನ್ ಸ್ಥಾಪಿಸುತ್ತಿದ್ದಾರಂತೆ. ಅದಕ್ಕಾಗಿ ದುಬೈನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದರಲ್ಲಿ ಪಾಲ್ಗೊಳ್ಳಲು ರಾಖಿ ತೆರಳಿದ್ದಾರೆ. ಅಂದಹಾಗೆ ಆದಿಲ್‌ರನ್ನು ಮದುವೆಯಾದ ಮೇಲೆ ರಾಖಿ ಬದಲಾಗಿದ್ದರು. ತುಂಡುಡುಗೆ ಬಿಟ್ಟು, ಮೈತುಂಬಾ ಮುಚ್ಚುವ ಬಟ್ಟೆ ಧರಿಸುತ್ತಿದ್ದರು. ಬುರ್ಖಾದಲ್ಲೂ ಕಾಣಿಸಿಕೊಂಡಿದ್ದರು. ಆದ್ರೆ ಇದೀಗ ಮತ್ತೆ ಎಂದಿನ ಶೈಲಿಗೆ ಮರಳಿದ್ದಾರೆ. ಮತ್ತೆ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿದಾಗ, ಅವನೇ ಇಲ್ಲದ ಮೇಲೆ ನಾನು ಯಾಕೆ ಬದಲಾಗಬೇಕು. ನಾನು ಎಂದಿನಂತೆಯೇ ಇರುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ.