CrimeHealthNational

ಮದುವೆ ದಿನವೇ ಹೃದಯಾಘಾತಕ್ಕೆ ವಧು ಬಲಿ; ಆಕೆಯ ತಂಗಿ ಜೊತೆ ಮದುವೆ

ಗಾಂಧಿನಗರ; ಮದುವೆ ದಿನವೇ ವಧುವೊಬ್ಬಳು ಹೃದಯಾಘಾತದಿಂದ ನಿಧನಳಾಗಿದ್ದಾಳೆ. ಇದರಿಂದಾಗಿ ಆಕೆಯ ತಂಗಿಯ ಜೊತೆ ವರನಿಗೆ ಮದುವೆ ಮಾಡಿಸಲಾಗಿದೆ. ಈ ಘಟನೆ ನಡೆದಿರೋದು ಗುಜರಾತಿನ ಸುಭಾಷ್‌ ನಗರದ ಭಾವನಗರದಲ್ಲಿ.

ಭಾವನಗರದ ಭಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ವಧು ಹೇತಾಲ್‌ ತಲೆತಿರುಗಿಬಿದ್ದಿದ್ದಾಳೆ. ಮಧುವೆ ವಿಧಿವಿಧಾನಗಳು ನಡೆಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ಅಷ್ಟರಲ್ಲಾಗಲೇ ವಧು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿಶಾಲ್‌ ಎಂಬಾತನ ಜೊತೆ ಮದುವೆ ನಡೆಯಬೇಕಿತ್ತು. ಆದ್ರೆ ವಧು ಸಾವನ್ನಪ್ಪಿದ್ದರಿಂದ ಮೃತ ಹೇತಾಲ್‌ ಸಹೋದರಿ ಜೊತೆ ವಿಶಾಲ್‌ ಮದುವೆ ನಡೆದಿದೆ. ಸಮಾರಂಭ ಮುಗಿಯುವವರೆಗೂ ಹೇತಲ್ ಅವರ ಮೃತದೇಹವನ್ನು ಕೋಲ್ಡ್ ಸ್ಟೋರೇಜ್‍ನಲ್ಲಿ ಇಡಲಾಗಿತ್ತು ಎಂದು ವರದಿಯಾಗಿದೆ.

Share Post