AstrologyCinema

ದೊಡ್ಮನೆ ಮೇಲೆ ಆಂಜನೇಯ ಸ್ವಾಮಿ ಅವಕೃಪೆ

ಅಪ್ಪು ಅವರ ಅಗಲಿಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಸಾವು ತೀವ್ರ ದಿಗ್ಬ್ರಮೆಯನ್ನುಂಟು ಮಾಡಿದೆ. ರಾತ್ರಿ ಹಾಡಿ ಕುಣಿದು ಉಲ್ಲಾಸದಿಂದ ಇದ್ದ ಜೀವ ಮರುದಿನವೇ ಇಲ್ಲವೆಂದರೆ ನಿಜಕ್ಕೂ ನಂಬಲಾಗುವುದಿಲ್ಲ. ಪವರ್ ಹೌಸ್ ರೀತಿಯೇ ಇದ್ದ ಅಪ್ಪು ಕಳೆದುಕೊಂಡಿರುವ ದೊಡ್ಮನೆ ಈಗ ಷೋಕಾಚರಣೆಯಲ್ಲಿ ಮುಳುಗಿದೆ.

 

ದೊಡ್ಮನೆ ಕುಟುಂಬದ ಮೇಲೆ ಆಂಜನೇಯ ಸ್ವಾಮಿ ಅವಕೃಪೆ ಬೀರಿದ್ದಾನ ?

ಅಪ್ಪು ಅವರ ಅಕಾಲಿಕ ಮರಣದಿಂದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಪುನೀತ್ ಜಾತಕದಲ್ಲಿಯೇ ದೋಷವಿತ್ತು, ಅವರು ಅಲ್ಪಾಯುಷಿ ಎಂದು ತಿಳಿದಿತ್ತು. ಅಪ್ಪು ಮತ್ತು ದೊಡ್ಮನೆ ಕುಟುಂಬಕ್ಕೆ ದೇವರ ಶಾಪವಿತ್ತು ಹೀಗೆ ಅನೇಕ ಸುದ್ದಿಗಳು ಚರ್ಚೆಯಲ್ಲಿವೆ. ಈ ವಾದಗಳಿಗೆ ಪೂರಕವೆಂಬಂತೆ ಸಾಕಷ್ಟು ಸನ್ನಿವೇಷಗಳು ಪೂರಕವಾಗಿರುವಂತೆ ಕಾಣ್ತಿದೆ.

ದೊಡ್ಮನೆ ಇತಿಹಾಸ ನೆನಪಿದ್ದವರು ಈ ರೀತಿ ಯೋಚಿಸಿರುವುದರಲ್ಲಿ ಯಾವುದೇ ದೋಷವಿಲ್ಲ ಎಂದೆನಿಸುತ್ತೆ. ಆಂಜನೇಯ ಸ್ವಾಮಿಯ ಅವಕೃಪೆ ಇವರನ್ನು ಬಾಧಿಸುತ್ತಿರಬಹುದೇನೋ ಎಂಬ ನಂಬಿಕೆಯೂ ಸಣ್ಣದಾಗಿ ಮೂಡುತ್ತದೆ.

 

ಶಿವಣ್ಣನ ಭಜರಂಗಿ ಸಂದರ್ಭದಲ್ಲಿ ಆದ ಅವಘಡ :

ಶಿವರಾಜ್ ಕುಮಾರ್ ನಟನೆಯ ಭಜರಂಗಿ ಸಿನಿಮಾ ಬಿಡುಗಡೆಯಾದಾಗ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ಭಜರಂಗಿ ರಿಲೀಸ್ ಟೈಮಲ್ಲೇ ನಟ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಪಾರ್ಶ್ವ ವಾಯು ಉಂಟಾಗಿದ್ದು. ಅದೇ ಸಮಯದಲ್ಲಿ ಶಿವಣ್ಣ ಮತ್ತು ಅವರ ಮಗಳ ಆರೋಗ್ಯವೂ ಹದಗೆಟ್ಟಿತ್ತು.

 

ಅಂಜನೀಪುತ್ರ ಸಮಯದಲ್ಲಿ ನಡೆದ ಅವಘಡ

ಪುನೀತ್ ರಾಜ್ ಕುಮಾರ್ ಅವರು ಅಂಜನೀಪುತ್ರ ಸಿನಿಮಾ ಒಪ್ಪಿಕೊಂಡಾಗ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನರಾದರು. ಇದೇ ಸಮಯದಲ್ಲಿ ಶಿವಣ್ಣನ ಕೂಡ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸಿನಿಮಾ ಕೂಡ ದೊಡ್ಡ ಮಟ್ಟದ ಸಕ್ಸಸ್ ಕಾಣಲಿಲ್ಲ

 

ಅಣ್ಣಾವ್ರ ಮನೆದೇವ್ರು ಮುತ್ತತ್ತಿರಾಯ

ಅಣ್ಣಾವ್ರ ಕುಟುಂಬದ ಮನೆದೇವ್ರು ಬಂದು ಮುತ್ತತ್ತಿರಾಯ. ಮುತ್ತತ್ತಿರಾಯ ಎಂದರೆ ಆಂಜನೇಯ ಸ್ವಾಮಿ. ಅಣ್ಣಾವ್ರ ಕುಟುಂಬದವರು ಮನೆದೇವರನ್ನು ಮರೆತ ಕಾರಣದಿಂದ ಈ ಅವಘಡಗಳೆಲ್ಲಾ ನಡೆಯುತ್ತಿದೆ ಎಂದು ಅಭಿಮಾನಿಯೊಬ್ಬರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

 

ರಾಘವೇಂದ್ರ ರಾಯರ ವೀಣೆ ಬಿತ್ತು !

ಪುನೀತ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ  ರಾಯರ ಮುಂದಿನ ಆರಾಧನೆಗೆ ಬರ್ತೀನಿ ಅಂದಾಗಲೇ ರಾಯರ ಮೂರ್ತಿ ಅಲುಗಾಡಿ ನಂತರ ವೀಣೆ ಬೀಳುತ್ತೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರವಾಗಿ ಶ್ರೀಗಳು ಮಾತನಾಡಿದ್ದು, “ ಅಂದು ಜನ ಜಾಸ್ತಿ ಇದ್ದ ಕಾರಣ ನೂಕಾಟದಿಂದ ಮೂರ್ತಿ ಬಿದ್ದಿದ್ದೆ ಹೊರತು ಇದು ಅಶುಭ ಸೂಚಕ ಖಂಡಿತ ಅಲ್ಲ” ಎಂದು ಹೇಳಿದ್ದಾರೆ. ಆದರೆ ಅಭಿಮಾನಿಗಳು ಕೇಳಬೇಕಲ್ಲ

 

ಅಪ್ಪು ಅವರ ಅಗಲಿಕೆ ಕಾರಣಗಳಿಗೆ ನಿಲುಕದ ಸಾವಾಗಿದೆ. ಅಭಿಮಾನಿಗಳ ಪವರ್ ಸ್ಟಾರ್ ಸಾವಿಗೆ ಕಾರಣ ಏನೇ ಇರಲಿ ಅವರು ನಮ್ಮನ್ನು ಅಗಲಿದ್ದು ನಿಜಕ್ಕೂ ದುರ್ವಿಧಿ.

Share Post