CrimeDistricts

ಜಮೀನು ವಿವಾದ ಹಿನ್ನೆಲೆ; ದುಷ್ಕರ್ಮಿಗಳಿಂದ ಮನೆಗೆ ಬೆಂಕಿ

ತುಮಕೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮನೆಗೆ ಬೆಂಕಿಯಿಟ್ಟು ಸುಟ್ಟು ಹಾಕಿರುವ ಘಟನೆ ತುಮಕೂರಿನ ಪಾವಗಡ ತಾಲೂಕಿನ ದ್ಯಾವಡಬೆಟ್ಟ ತಾಂಡದಲ್ಲಿ ನಡೆದಿದೆ.

ಗ್ರಾಮದ ಕುಮಾರ ನಾಯ್ಕ ಎಂಬುವವರ ಮನೆಗೆ ಬೆಂಕಿ ಹಚ್ಚಿದ್ದಾರೆ . ಬೆಂಕಿಯ ಕೆನ್ನಾಲಿಗೆಗೆ ಮನೆಯು ಭಾಗಶಃ ಸುಟ್ಟು ಭಸ್ಮವಾಗಿದೆ . ಮನೆಯಲ್ಲಿದ್ದ ಫ್ರಿಡ್ಜ್ , ಟಿವಿ , ಸೌಂಡ್ ಸಿಸ್ಟಮ್ , ಮಂಚ ಸೇರಿದಂತೆ ಸುಮಾರು ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು,ಜಮೀನಿನ ದಾಖಲೆ ಸೇರಿದಂತೆ ಹಲವು ದಾಖಲೆಗಳು ಬೆಂಕಿಗಾಹುತಿ ಆಗಿದೆ .

ಇತ್ತ ದುಷ್ಕರ್ಮಿಗಳು ಬೆಂಕಿ ಹಚ್ಚುವ ಮುನ್ನ ಮನೆಯಲ್ಲಿದ್ದ 40 ಗ್ರಾಂ ಚಿನ್ನ , 6 ಲಕ್ಷ ರೂ . ನಗದು ದೋಚಿ ಪರಾರಿ ಆಗಿದ್ದಾರೆ . ಕುಮಾರ್ ನಾಯ್ಕ ಕುಟುಂಬ ಬೆಂಗಳೂರಿಗೆ ಹೋದಾಗ ಹೊಂಚು ಹಾಕಿ ಈ ಕೃತ್ಯ ಎಸಗಲಾಗಿದೆ . ಕುಮಾರ್ ನಾಯ್ಕಗೆ ಕೃಷ್ಣ ನಾಯ್ಕ ಎಂಬಾತನೊಂದಿಗೆ ಜಮೀನು ವಿವಾದ ಇತ್ತು . ಹೀಗಾಗಿ ಕಸ್ನ ನಾಯ್ಕ ತನ್ನ ಸ್ನೇಹಿತರಾದ ಶಿವರಾಜ್ ನಾಯ್ಕ , ಚೇತನಕುಮಾರ್ ನಾಯ್ಗೆ ಡೀಲ್ ಕೊಟ್ಟು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ . ಸದ್ಯ ಪ್ರಕರಣ ಸಂಬಂಧ ಪಾವಗಡ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ನಡೆಸಿದ್ದಾರೆ

Share Post