CrimeNational

ಚಿರತೆಗಾಗಿ ಇಟ್ಟಿದ್ದ ಬೋನ್‌ನಲ್ಲಿ ಸಿಕ್ಕಿಬಿದ್ದ ಕೋಳಿ ಕಳ್ಳ

ಲಕ್ನೋ; ಇದೀಗ ಎಲ್ಲೆದೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಚಿರತೆಗಳನ್ನು ಹಿಡಿಯಲು ಬೋನ್‌ಗಳನ್ನು ಇಡಲಾಗಿರುತ್ತದೆ. ಚಿರತೆ ಬರಲಿ ಎಂದು ಅದರಲ್ಲಿ ಕೋಳಿಯೊಂದನ್ನು ಇರಿಸಿರುತ್ತಾರೆ. ಅದನ್ನು ಗಮನಿಸಿದ ವ್ಯಕ್ತಿಯೊಬ್ಬ ಆ ಕೋಳಿಯನ್ನು ಕದಿಯಲು ಹೋಗಿ ಬೋನ್‌ನಲ್ಲಿ ಲಾಕ್‌ ಆಗಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬುಲಂದ್‌ ಶಹರ್‌ ಎಂಬಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಗಾಗಾ ಬೋನ್‌ ಇರಿಸಿದ್ದ ಜಾಗಕ್ಕೆ ಬಂದು ನೋಡುತ್ತಿರುತ್ತಾರೆ. ಹಾಗೆ ಪರಿಶೀಲಿಸಲು ಬಂದಾಗ ವ್ಯಕ್ತಿಯೊಬ್ಬ ಬೋನ್‌ ನಲ್ಲಿ ಸಿಲುಕಿರುವ ಪತ್ತೆಯಾಗಿದೆ. ಆತನನ್ನು ವಿಚಾರಿಸಿದಾಗ ಕೋಳಿ ಕದಿಯಲು ಹೋದಾಗ ಬೋನ್‌ ಬಾಗಿಲು ಮುಚ್ಚಿದೆ ಎಂದು ಆತ ಹೇಳಿದ್ದಾನೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ

Share Post