1 ರೂ ಚಿಲ್ಲರೆ ನೀಡದ ಕಂಡಕ್ಟರ್ ವಿರುದ್ದ ಸಮರ; ಪ್ರಯಾಣಿಕನಿಗೆ ಸಿಕ್ಕಿದ್ದೇನು..?
ಬೆಂಗಳೂರು: 1 ರೂ ಚಿಲ್ಲರೆ ಹಣ ನೀಡದ ಹಿನ್ನೆಲೆ ಬಸ್ ಕಂಡಕ್ಟರ್ ವಿರುದ್ದ ಕೊರ್ಟ್ ಮೊರೆ ಹೋಗಿದ್ದ ಪ್ರಯಾಣಿಕನಿಗೆ 2000 ರೂ ಹಣ ಪಾವತಿಸುವಂತೆ ಬಿಎಂಟಿಸಿಗೆ ಕೋರ್ಟ್ ಆದೇಶಿಸಿದೆ.
ರಮೇಶ್ ನಾಯ್ಕ ಎಂಬ ಪ್ರಯಾಣಿಕರೊಬ್ಬರು 2019 ರಲ್ಲಿ ಬೆಂಗಳೂರಿನ ಶಾಂತಿನಗರದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಈ ವೇಳೆ 30 ರೂ ನೀಡಿ 29 ರೂ ಟಿಕೆಟ್ ಖರಿದಿಸಿದ್ದರು ಕಂಡಕ್ಟರ್ 1 ರೂ ಚಿಲ್ಲರೆ ನೀಡುವುದಾಗಿ ಹೇಳಿ ಬಳಿಕ ಅನುಚಿತವಾಗಿ ವರ್ತಿಸಿದ್ದರು.
ಕಂಡಕ್ಟರ್ ಚಿಲ್ಲರೆ ಹಣ ನೀಡದಿದ್ದನ್ನ ಪ್ರಶ್ನಿಸಿ ಪ್ರಯಾಣಿಕ ರಮೇಶ್ ನಾಯ್ಕ ಜಿಲ್ಲಾ ಗ್ರಾಹಕ ನ್ಯಾಯಲಯದ ಮೊರೆ ಹೋಗಿ 15000 ಪರಿಹಾರ ಕೋರಿದ್ದರು, ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಪ್ರಯಾಣಿಕನಿಗೆ 2000 ಹಾಗೂ ದೂರುದಾರರ ಕಾನೂನು ಶಲ್ಕುವಾಗಿ 1000 ಪಾವತಿಸುವಂತೆ ಬಿಎಂಟಿಸಿಗೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಲಯ ನೀಡಿರುವ ಆದೇಶದಂತೆ 45 ದಿನಗಳೊಳಗಾಗಿ ಪರಿಹಾರದ ಮೊತ್ತವನ್ನ ಪಾವತಿಸದಿದ್ದಲ್ಲಿ ವಾರ್ಷಿಕ 6000 ಸಾವಿರ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.