ಮಹಿಳಾ ಅಧಿಕಾರಿಗಳ ಜಟಾಪಟಿ ವಿಚಾರ; ರೋಹಿಣಿ, ರೂಪಾ ವರ್ಗಾವಣೆ
ಬೆಂಗಳೂರು; ಬೀದಿಜಗಳಕ್ಕೆ ನಿಂತಿದ್ದ ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಕ್ರಮ ಕೈಗೊಂಡಿದೆ. ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮನೀಷ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಲಾಗಿದೆ
ಐಪಿಎಸ್ ಅಧಿಕಾರಿ ರೂಪಾ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಲಾಗಿದೆ. ಇಬ್ಬರಿಗೂ ಯಾವುದೇ ಸ್ಥಳ ನಿಯುಕ್ತಿಗೊಳಿಸಿಲ್ಲ. ಮೊದಲು ಡಿ. ರೂಪಾ ಕರಕುಶಲ ಅಭಿವೃದ್ಧಿ ನಿಗಮ ಎಂಡಿಯಾಗಿದ್ದರು ಹಾಗೂ ರೋಹಿಣಿ ಸಿಂಧೂರಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿದ್ದರು. ರೂಪಾ ಅವರ ಪತಿ ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್ರನ್ನು ರಾಜ್ಯಸರ್ಕಾರ ವರ್ಗಾವಣೆ ಮಾಡಿದೆ.
ಎಚ್.ಬಸವರಾಜೇಂದ್ರ ಅವರನ್ನು ರೋಹಿಣಿ ಅವರ ಸ್ಥಾನಕ್ಕೆ, ಭಾರತಿ ಅವರನ್ನು ರೂಪಾ ಅವರ ಜಾಗಕ್ಕೆ ನಿಯೋಜಿಸಲಾಗಿದೆ.