ರೋಹಿಣಿ ಸಿಂದೂರಿ ರಾಜಿ ಸಂಧಾನಕ್ಕೆ ಹೋಗುವ ಅಗತ್ಯವೇನಿತ್ತು.?; ಡಿ.ರೂಪಾ ಪ್ರಶ್ನೆ
ಬೆಂಗಳೂರು; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ವಾರ್ ಇನ್ನೂ ಮುಂದುವರೆದಿದೆ. ರೋಹಿಣಿ ಅವರ ಖಾಸಗಿ ಫೋಟೋಗಳನ್ನು ಹರಿಬಿಟ್ಟಿದ್ದ ರೂಪಾ ಅವರು, 19 ಆರೋಪಗಳನ್ನು ಕೂಡಾ ಮಾಡಿದ್ದರು. ಇದೀಗ ಸುದ್ದಿಗೋಷ್ಠಿ ನಡೆಸಿ, ತಮ್ಮ ಆರೋಪಗಳನ್ನು ಸಮರ್ಥಿಸಿಕೊಂಡಿದ್ದಾರೆ.
ರೋಹಿಣಿ ಸಿಂಧೂರಿ ವಿರುದ್ಧ ನಾನು ಮಾಡಿರುವ ಆರೋಪ ಸತ್ಯವೇ ಆಗಿದೆ ಎಂದು ಡಿ.ರೂಪ ಸ್ಪಷ್ಟನೆ ಕೊಟ್ಟಿದ್ದಾರೆ. ರೋಹಿಣಿ ಸಿಂಧೂರಿಯವರು ಶಾಸಕರ ಬಳಿಗೆ ರಾಜೀ ಸಂಧಾನಕ್ಕೆ ಹೋಗುವ ಅಗತ್ಯವೇನಿತ್ತು? ಎಂದು ರೂಪಾ ಪ್ರಶ್ನೆ ಮಾಡಿದ್ದಾರೆ. ಐಎಎಸ್ ಅಧಿಕಾರಿ ಆಗಿ ರಾಜಕಾರಣಿಗಳ ಬಳಿ ಸಂಧಾನಕ್ಕೆ ಹೋಗುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ರೂಪಾ, ದೇಶದ ಇತಿಹಾಸದಲ್ಲಿ ಮೊದಲ ಬಾರಿ ರಾಜಕಾರಣಿ ಬಳಿ ಸಂಧಾನಕ್ಕೆ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರಿನ ಪಾರಂಪರಿಕ ತಾಣದಲ್ಲಿ ರೋಹಿಣಿಯವರು ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದಾರೆ. ಆ ಮೂಲಕ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದೂ ರೂಪಾ ಆರೋಪ ಮಾಡಿದ್ದಾರೆ.
ನಾನು ರೋಹಿಣಿಯವರಿಗೆ ತುಂಬಾ ಸಹಾಯ ಮಾಡಿಕೊಟ್ಟಿದ್ದೇನೆ. ಡಿ.ಕೆ ರವಿಯವರ ವಿಚಾರದಲ್ಲಿ ಕೂಡಾ ನಾನು ಮಾತನಾಡಿದ್ದೆ. ಅವರು ಅವತ್ತೆ ಕಟ್ ಮಾಡಬೇಕಿತ್ತು. ಅವರು ಅವತ್ತೇ ಎಡವಿದ್ರು ಎಂದೂ ರೂಪಾ ಹೇಳಿದ್ದಾರೆ.