ನಟಿ ಅಭಿನಯ ಹಾಗೂ ಕುಟುಂಬದವರಿಗೆ ಲುಕ್ ಔಟ್ ನೋಟಿಸ್
ಬೆಂಗಳೂರು; ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಹಾಗೂ ಆಕೆಯ ಕುಟುಂಬದವರ ಬಂಧನಕ್ಕಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ನಟಿ ಅಭಿನಯ ಅವರ ಅತ್ತಿಗೆ ವರಲಕ್ಷ್ಮೀ ನೀಡಿದ್ದ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ್ದ ಕೋರ್ಟ್, ಅಭಿನಯ ಹಾಗೂ ಅವರ, ತಾಯಿ ಸಹೋದನಿಗೆ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಅಂದಿನಿಂದ ಅಭಿನಯ ಕುಟುಂಬ ತಲೆಮೆರೆಸಿಕೊಂಡಿದೆ.
ಅಭಿನಯ ಕುಟುಂಬದವರು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆಹೋಗಿತ್ತು. ಆದ್ರೆ ಹೈಕೋರ್ಟ್ ಕೂಡಾ ಕೆಳ ಕೋರ್ಟ್ನ ಆದೇಶವನ್ನು ಎತ್ತಿಹಿಡಿದಿತ್ತು. ಅಂದಿನಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.