ಮೇಲುಕೋಟೆ ಯತಿರಾಜ ಶ್ರೀಗಳಿಗೆ ವೈ ಕೆಟಗರಿ ಭದ್ರತೆ
ಬೆಂಗಳೂರು; ಮೇಲುಕೋಟೆಯ ಯದುಗಿರಿ ಮಠದ ಪೀಠಾಧಿಪತಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿಗೆ ನಿಷೇಧಿತ ಪಿಎಫ್‌ಐ ಸಂಘಟನೆ ಬೆದರಿಕೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ಒದಗಿಸಿದೆ.
ಯತಿರಾಜ ಜೀಯರ್ ಅವರಿಗೆ ಇತ್ತೀಚೆಗೆ ಪಿಎಫ್ಐ ಸಂಘಟನೆ ವಿಡಿಯೋ ಸಂದೇಶ ರವಾನಿಸಿತ್ತು. ಅದ್ರಲ್ಲಿ ಶ್ರೀಗಳಿಗೆ ಜೀವಬೆದರಿಕೆ ಹಾಕಲಾಗಿತ್ತು. ಈ ಸುದ್ದಿ ರಾಷ್ಟ್ರೀಯ ಚಾನಲ್‌ಗಳಲ್ಲೂ ಪ್ರಸಾರವಾಗಿತ್ತು. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ಶ್ರೀಗಳಿಗೆ ವೈ ಕೆಟಗರಿ ಭದ್ರತೆ ಒದಗಿಸಿದೆ.
೧. Y ಕೆಟಗರಿ ಭದ್ರತೆಯಲ್ಲಿ 28 ಪೊಲೀಸ್ ಸಿಬ್ಬಂದಿ ಇರ್ತಾರೆ, ಅದ್ರಲ್ಲಿ ಇಬ್ಬರು ಕಮಾಂಡರ್ ಗಳು ಇರ್ತಾರೆ
೨. ಅವರಿಗೆ ವಾಹನದ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತಿದೆ
೩. ಭದ್ರತೆ ಪಡೆದವರು ಎಲ್ಲಿಯೇ ಹೋಗಲಿ Y ಕ್ಯಾಟಗಿರಿ ಸೆಕ್ಯುರಿಟಿ ಜೊತೆಯಲ್ಲೇ ಇರುತ್ತೆ
೪. 2 ಕಮಾಂಡರ್ ಎರಡು ಶಿಫ್ಟ್ ಕೆಲಸ ಮಾಡ್ತಾರೆ – ಸ್ಟೆನ್ ಗನ್ ಬಳಕೆ ಮಾಡ್ತಾರೆ
೫. 9 ಜನ ಪೊಲೀಸ್ ಸಿಬ್ಬಂದಿ 9 MM ಪಿಸ್ತೂಲ್ ಬಳಕೆ ಮಾಡ್ತಾರೆ
೬. ಸಾರ್ವಜನಿಕ ಸಭೆಗಳಿಗೆ ಹೋದ್ರೆ ಬಾಂಬ್ ಡಿಟೆಕ್ಟರ್ ತಗೊಂಡು ಹೋಗ್ತಾರೆ
೭. ಯತಿರಾಜ ಮಠದ ಸ್ವಾಮೀಜಿಗಳಿಗೆ ಮೂರು ರಾಜ್ಯಗಳಲ್ಲಿ ಭದ್ರತೆ ಒದಗಿಸಿದ್ದಾರೆ
೮. ತೆಲಂಗಾಣ, ಆಂಧ್ರ ಹಾಗೂ ಕರ್ನಾಟಕದಲ್ಲಿ Y ಕ್ಯಾಟಗಿರಿ ಭದ್ರತೆ
೯. Y ಕ್ಯಾಟಗಿರಿ ಭದ್ರತೆ ಯಲ್ಲಿ ಮೂರು ಜನ PSO ( ಪರ್ಸನಲ್ ಸೆಕ್ಯುರಿಟಿ ಆಫೀಸರ್ ) ಇರ್ತಾರೆ
೧೦. ಮೂರು ಪಾಳಿಯಲ್ಲಿ ಮೂರು ಜನ ಕೆಲಸ ಮಾಡ್ತಾರೆ