CrimeDistricts

ಮಂಡ್ಯದಲ್ಲಿ ಮಕ್ಕಳ ಕಳ್ಳರ ಭೀತಿ; ಮುಸುಕುದಾರಿಯಿಂದ ಅಪಹರಣ ಯತ್ನ

ಮಂಡ್ಯ: ಮಂಡ್ಯದಲ್ಲಿ ಮಕ್ಕಳ ಕಳ್ಳರ ಭೀತಿ ಹೆಚ್ಚಾಗಿದೆ. ಬೈಕ್ ನಲ್ಲಿ ಬಂದ ಮುಸುಕುದಾರಿಗಳಿಂದ ಮಗುವಿನ ಅಪಹರಣ ಯತ್ನ ನಡೆದಿರುವ ಘಟನೆ ಮಳವಳ್ಳಿಯಲ್ಲಿ ನಡದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕಿರಿಗಾವಲು ಗ್ರಾಮದಲ್ಲಿ ಕಳೆದ ರಾತ್ರಿ ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಮಗುವನ್ನ ಅಪಹರಿಸಲು ಯತ್ನಿಸಿದ್ದಾರೆ. ಅಪಹರಣಕಾರರನ್ನ ಕಂಡ ಮಗು ಕಿರುಚಿಕೊಂಡ ಕೂಡಲೇ ಮುಸುಕುಧಾರಿಗಳು ಓಡಿಹೋಗಿದ್ದಾರೆ. ಈ ದೃಷ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಪೋಷಕರಲ್ಲಿ ಆತಂಕ ಸೃಷ್ಠಿಸಿದೆ.

ಕಳ್ಳರು, ನೆನ್ನೆ ಮಧ್ಯಾಹ್ನ ಪೌಡರ್ ಮಾರುವ ನೆಪದಲ್ಲಿ ಗ್ರಾಮಕ್ಕೆ ಬಂದಿದ್ದರು, ಬಳಿಕ ರಾತ್ರಿ ಮುಸುಕು ಧರಿಸಿ ಬಂದಿದ್ದಾರೆ ಎಂದು ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ‌.

ಮುಸುಕುದಾರಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದು, ಮಗು ಕಳವಿಗೆ ಬಂದಿದ್ರಾ ಅಥವಾ ಮನೆಗಳ್ಳತನಕ್ಕೆ ಬಂದಿದ್ದಾರ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ‌. ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share Post