BengaluruCrime

ಅಕ್ರಮವಾಗಿ ಚಿನ್ನ ರವಾನೆ; ವಿಮಾನ ನಿಲ್ದಾಣದಲ್ಲಿ ಆರೋಪಿ ಅರೆಸ್ಟ್‌

ಬೆಂಗಳೂರು; ಅಕ್ರಮವಾಗಿ ಚಿನ್ನ ಸಾಗಾಟ ಮಾಡುತಿದ್ದ ಸ್ಮಗ್ಲರ್ ನನ್ನ ಬೆಂಗಳೂರಿನ ವಿಮಾನ ನಿಲ್ದಾಣದಲಲ್ಲಿ ಬಂಧಿಸಲಾಗಿದೆ. ಕಿಲಾಡಿ ಸ್ಮಗ್ಲರ್‌ ತನ್ನ 30 ಲಕ್ಷ ಬೆಲೆಬಾಳುವ ಚಿನ್ನವನ್ನ ಪೇಸ್ಟ್ ರೂಪದಲ್ಲಿ ಬ್ಯಾಂಕಾಕ್‌ ನಿಂದ ಬೆಂಗಳೂರಿಗೆ ತಂದಿದ್ದ.

ಈ ಕಿಲಾಡಿ ಥಾಯ್ ಏರ್ವೇಸ್ ಫ್ಲೈಟ್ ಟಿಜಿ 325 ಫ್ಲೈಟ್ ನಲ್ಲಿ ಬೆಂಗಳೂರಿಗೆ ಆಗಮಿಸಿದ್ದ.
ಬೆಂಗಳೂರು ಕಸ್ಟಮ್ಸ್‌ನ ವಾಯು ಗುಪ್ತಚರ ಘಟಕ ಕೊಟ್ಟಿರುವ ಮಾಹಿತಿ ಮೇಲೆ ಈತ ನನ್ನ ಬಂಧಿಸಲಾಗಿದೆ.
38 ವರ್ಷದ ಖತರ್ನಾಕ್ ಸ್ಮಗ್ಲರ್ ಮೂಲತಹ ಕನಾ೯ಟಕದವನು.ಈತ ಸ್ಮಗ್ಲಿಂಗ್‌ ಮಾಡಲೆಂದೆ ಜೀನ್ಸ್ ಪ್ಯಂಟ್‌ ಅನ್ನ ಕಸ್ಟಾಮೈಸ್ ಮಾಡಿ ಹೊಲಿದ್ದ. ಈತನ ಥೈಲ್ಯಾಂಡ್‌ ನ ಸಣ್ಣ ಪ್ರವಾಸವು ಅನುಮಾನವನ್ನು ಹುಟ್ಟಿಸಿದ್ದರಿಂದ ಕಸ್ಟಮ್ಸ್ ಅಧಿಕಾರಿಗಳು ಅವನು ಧರಿಸಿದ್ದ ಪ್ಯಾಂಟ್‌ನಲ್ಲಿ ಅನುಮಾನಾಸ್ಪದ ಹೊಲಿಗೆಗಳು ಕಂಡು ಆತನನ್ನು ತಪಾಸಣೆ ನಡೆಸಿದಾಗ ಆತ 30 ಲಕ್ಷ ಬೆಲೆ ಬಾಳುವ ಚಿನ್ನದ ಪೇಸ್ಟ್ ನ್ನ ತನ್ನ ಪ್ಯಂಟ್‌ ನ ಸಣ್ಣ ಸಣ್ಣ ಜೇಬಿನಲ್ಲಿ ತುಂಬಕೊಂಡಿರುವುದು ಗಮನಕ್ಕೆ ಬಂದಿದೆ ಕೂಟಲೆ ಅಧಿಕಾರಿಗಳ ಆತನನ್ನ ಬಂಧೀಸಿದ್ದಾರೆ

Share Post