CinemaNational

ನಯನತಾರಾಗೂ ಆಗಿತ್ತಂತೆ ಕಾಸ್ಟಿಂಗ್‌ ಕೌಚ್‌ ಅನುಭವ..!

ಮುಂಬೈ; ಕಾಸ್ಟಿಂಗ್‌ ಕೌಚ್‌ ಬಗ್ಗೆ ಆಗಾಗ ಮಾತುಗಳು ಕೇಳಿಬರುತ್ತಿರುತ್ತವೆ. ಇದೀಗ ಖ್ಯಾತ ಬಹುಭಾಷಾ ನಟಿ ನಯನತಾರಾ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ಅವಕಾಶ ಕೇಳಲು ಬಂದ ನಟಿಯರನ್ನು ಬಳಸಿಕೊಳ್ಳುವ ಅನೇಕ ನಿರ್ಮಾಪಕರು ಇದ್ದಾರೆ. ನನಗೂ ಕೂಡಾ ಇಂತಹ ಅನುಭವವಾಗಿತ್ತು. ನಾನು ಆರಂಭದಲ್ಲಿ ಕಾಸ್ಟಿಂಗ್‌ ಕೌಚ್‌ ಅನುಭವ ಎದುರಿಸಿದ್ದೆ ಎಂದಿರುವ ನಯನತಾರಾ, ಅವಕಾಶ ಕೊಡ್ತೀವಿ. ಅದಕ್ಕೆ ಪ್ರತಿಯಾಗಿ ಕಮಿಟ್‌ಮೆಂಡ್‌ ಕೊಡುವಂತೆ ಕೇಳಿದ್ದರು. ಆದ್ರೆ ನನಗೆ ನನ್ನ ನಟನೆಯ ಮೇಲೆ ನಂಬಿಕೆ ಇತ್ತು. ಹೀಗಾಗಿ, ನಾನು ಆ ಆಫರ್‌ ತಿರಸ್ಕರಿಸಿದ್ದೆ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಚಿತ್ರರಂಗಕ್ಕೆ ಬಂದಾಗ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜೊತೆ ೨೦೨೨ರಲ್ಲಿ ಮದುವೆಯಾಗಿದ್ದು, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಬಗ್ಗೆ ಖುಷಿಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ.

Share Post