BengaluruCrime

ರಸ್ತೆ ಕಾಮಗಾರಿ ಎಫೆಕ್ಟ್‌; ಆಕ್ಸಿಡೆಂಟ್‌ನಲ್ಲಿ ಮಹಿಳೆ ಸಾವು

ಬೆಂಗಳೂರು; ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿಯಿಂದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ  ಈ ದುರ್ಘಟನೆ ಸಂಭವಿಸಿದೆ.

ನಿನ್ನೆ ಸಂಜೆ ನಡೆದ ಚಿಕ್ಕಗೊಲ್ಲರಹಟ್ಟಿಯಲ್ಲಿ ಅಪಘಾತ ಸಂಭವಿಸಿದ್ದು, ನಳಿನಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿದೆ ಅಂತ ಒನ್ ವೇ ಅಲ್ಲಿ ಬಂದ ಮಹಿಳೆಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಕ್ರದಡಿ ಸಿಲುಕಿದ ನಳಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ನಳಿನಿಯವರು ಚಿಕ್ಕಗೊಲ್ಲರಹಟ್ಟಿ ಸಮೀಫದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Share Post