ಹೆಣ್ಣುಮಕ್ಕಳು ಜನಿಸಿದ್ದಕ್ಕೆ ಕಿರುಕುಳ; ಮಕ್ಕಳೊಂದಿಗೆ ನಾಲೆಗೆ ಹಾರಿದ ತಾಯಿ
ಬಳ್ಳಾರಿ; ಮಕ್ಕಳೊಂದಿಗೆ ನಾಲೆಗೆ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಬಳ್ಳಾರಿ ತಾಲ್ಲೂಕಿನ ಮೋಕಾ ಬಳಿ ನಡೆದಿದೆ.
ಹೆಣ್ಣು ಮಕ್ಕಳು ಜನಿಸಿದ್ದಕ್ಕೆ ನಿತ್ಯ ಗಂಡನ ಕಿರುಕುಳದಿಂದ ಬೇಸತ್ತ ತಾಯಿ ತನ್ನೆರಡು ಹೆಣ್ಣು ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದೃಷ್ಟವಶಾತ್ ಒಂದು ಮಗು ಬದುಕುಳಿದಿದೆ. ತಾಲ್ಲೂಕಿನ ಗುಗ್ಗರಟ್ಟಿ ಗ್ರಾಮದ ಲಕ್ಷ್ಮೀ, ಮಗಳು ಶಾಂತಿ(2) ಮೃತ ದುರ್ದೈವಿಗಳು. ನಾಲ್ಕು ವರ್ಷದ ವೆನಿಲಾ ಳನ್ನ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
16 ವರ್ಷದ ಹಿಂದೆ ಗುಗ್ಗರಟ್ಟಿ ಗ್ರಾಮದ ವೀರಭದ್ರ ಎಂಬಾತನ ಜೊತೆ ವಿವಾಹವಾಗಿದ್ದ ಲಕ್ಷ್ಮೀ ಗೆ ನಾಲ್ಕು ಜನ ಹೆಣ್ಣು ಮಕ್ಕಳು ಜನಿಸಿದ್ದವು. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ವೀರಭದ್ರ ನಾಲ್ಕು ಹೆಣ್ಣು ಮಕ್ಕಳೇ ಜನಿಸಿದ್ದರಿಂದ ಕುಪಿತಗೊಂಡು ನಿತ್ಯ ಲಕ್ಷ್ಮೀಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಗಂಡನ ಕಿರುಕುಳ ತಾಳಲಾರದೆ ಲಕ್ಷ್ಮೀ ಎರಡು ಮಕ್ಕಳೊಂದಿಗೆ ತುಂಗಾ ಭದ್ರಾ ನಾಲೆಗೆ ಹಾರಿದ್ದಾಳೆ. ಕೂಡಲೇ ಸ್ಥಳೀಯರು ಮೂವರನ್ನ ರಕ್ಷಿಸುವ ಪ್ರಯತ್ನ ಮಾಡಿದ್ದು ವೆನಿಲಾ ಳನ್ನ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ, ಲಕ್ಷ್ಮೀ ಹಾಗೂ ಶಾಂತಿ ಮೃತಪಟ್ಟಿದ್ದಾರೆ. ಶಾಂತಿಯ ಮೃತದೇಹ ಪತ್ತೆಯಾಗಿದ್ದು, ಲಕ್ಷ್ಮೀ ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.