DistrictsPolitics

ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಸಾರಥ್ಯ ಯಾರಿಗೆ; ಸಿದ್ದು ಕೋಲಾರಕ್ಕೆ ಹೋದ್ರೆ ಕೈ ಸ್ಥತಿ ಏನು..?

ಮೈಸೂರು; ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡೋದಾಗಿ ಹೇಳಿದ್ದಾರೆ. ಹೀಗಾಗಿ ಮೈಸೂರು ಭಾಗದಲ್ಲಿ ಪಕ್ಷದ ಸಾರಥ್ಯ ವಹಿಸುವವರು ಯಾರು ಎಂಬುದರ ಬಗ್ಗೆ ಚರ್ಚೆ ನಡೆಸಿದೆ. ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಇಷ್ಟು ಸಿದ್ದರಾಮಯ್ಯ ನಿಯಂತ್ರಣವಿತ್ತು. ಆದ್ರೆ, ಸಿದ್ದರಾಮಯ್ಯ ಅವರು ಈಗ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಕೋಲಾರಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ಉಳಿದ ಸಮಯದಲ್ಲಿ ಅವರು ಹೆಚ್ಚು ಬೆಂಗಳೂರಲ್ಲಿ ಕಳೆಯುತ್ತಾರೆ. ಹೀಗಿರುವಾಗಿ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಯ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಹಿನ್ನೆಡೆಯಾಗಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ.

ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವದ ಕೊರತೆಯಾಗಬಹುದು. ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಗಳಿಗೆ ಸಿದ್ದು ನಂತರ ಸೆಕೆಂಡ್ ಜನರೇಷನ್ ಲೀಡರ್ ಸರ್ಚಿಂಗ್‌ನಲ್ಲಿದೆ. ಮೈಸೂರು ಭಾಗದಲ್ಲಿ ಸಮರ್ಥವಾಗಿ ನಿಭಾಯಿಸುವ ನಾಯಕನ ಹುಡುಕಾಟ ಶುರುಮಾಡಿದೆ. ಸಿದ್ದು ನಂತರದ ಸ್ಥಾನದಲ್ಲಿ ಈ ಭಾಗದಲ್ಲಿ ಮೂವರು ನಾಯಕರಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವ ಡಾ ಹೆಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್‌ ಸೇಠ್, ವೆಂಕಟೇಶ್ ಮುಂಚೂಣಿಯಲ್ಲಿದ್ದಾರೆ.
ಎಲ್ಲಾ ಸಮುದಾಯಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ಜಾವಾಬ್ದಾರಿ ತೆಗೆದುಕೊಳ್ಳುವ ನಾಯಕತ್ವದ ಕೊರತೆ ಇದೆ. ಇದು ಬಿಜೆಪಿ, ಜೆಡಿಎಸ್‌ಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ.

Share Post