ಉಗ್ರಗಾಮಿ ಚಟುವಟಿಕೆ ಹಿನ್ನೆಲೆ; ಮತ್ತಿಬ್ಬರು ಶಂಕಿತರ ಅರೆಸ್ಟ್
ಶಿವಮೊಗ್ಗ; ಉಗ್ರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ರಾಜ್ಯದಲ್ಲಿ ಮತ್ತಿಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ತುಂಗಾ ತಟದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣ ಮತ್ತು ಐಎಸ್ಐಎಸ್ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಪೆರ್ಮಣ್ಣೂರಿನ ಮಜಿನ್ ಅಬ್ದುಲ್ ರಹಮಾನ್ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ನದೀಂ ಅಹ್ಮದ್ ಬಂಧಿತರ ಶಂಕಿತ ಉಗ್ರರು. ಇವರಿಬ್ಬರೂ ಮಾಜ್ ಮುನೀರ್, ಸೈಯದ್ ಯಾಸೀನ್ ಜೊತೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಮಾಜ್ ಮುನೀರ್, ಸೈಯದ್ ಯಾಸೀನ್ ಈ ಇಬ್ಬರನ್ನು ಉಗ್ರ ಚಟುವಟಿಕೆಗಳಿಗೆ ನೇಮಿಸಿಕೊಂಡಿದ್ದರು. ಈಗಾಗ್ಲೇ ಎನ್ಐಎ ಇವರಿಬ್ಬರು ಸೇರಿ ನಾಲ್ವರನ್ನು ಬಂಧಿಸಿದೆ.