BengaluruHealth

ದೇಶದಲ್ಲಿ ಹೆಚ್ಚಿರುವ ಚಳಿ; ಹೃದಯಾಘಾತಗಳು ಹೆಚ್ಚಾಗುವ ಭೀತಿ

ಬೆಂಗಳೂರು; ದೇಶದ ಹಲವೆಡೆ ಕೊರೆಯುವ ಚಳಿ ಹೆಚ್ಚಾಗಿದೆ. ಕರ್ನಾಟಕದ ಹಲವು ಭಾಗ, ದೆಹಲಿ, ಮುಂಬೈ ಮುಂತಾದ ಕಡೆ ತಾಪಮಾನ ಅತಿ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ಜನ ಚಳಿಗೆ ತತ್ತರಿಸುತ್ತಿದ್ದಾರೆ. ಹೆಚ್ಚು ಚಳಿಯಿಂದಾಗಿ ಹೃದಯಾಘಾತಗಳು ಹೆಚ್ಚಾಗುವ ಸಂಭವವಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ರಾಜ್ಯದ ಬೀದರ್‌ ನಲ್ಲಿ ತಾಪಮಾನ 7 ಡಿಗ್ರಿಗೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಚಳಿಗೆ ಹೈರಾಣಾಗಿದ್ದಾರೆ.

ಚಳಿಗಾಲದಲ್ಲಿ ರಕ್ತನಾಳಗಳು ಸಂಕುಚಿತವಾಗುತ್ತವೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕೂಡಾ ಇರುತ್ತದೆ. ಇದ್ರಿಂದಾಗಿ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿಸಿದ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಇರಬೇಕು. ಆದಷ್ಟು ಮನೆಯಲ್ಲೇ ಇರಬೇಕು. ಬೆಚ್ಚನೆಯ ಉಡುಪುಗಳನ್ನು ಧರಿಸಬೇಕು ಅಂತ ವೈದ್ಯರು ಹೇಳುತ್ತಿದ್ದಾರೆ.

ಚಳಿಗಾಲದಲ್ಲಿ ರಕ್ತವು ದಪ್ಪವಾಗುತ್ತದೆ ಎಂದೂ ವೈದ್ಯರು ಹೇಳಿದ್ದಾರೆ. ರಕ್ತನಾಳಗಳ ಕಿರಿದಾಗುವಿಕೆಯಿಂದಾಗಿ ದೇಹದಲ್ಲಿ ರಕ್ತ ಹರಿಯುವುದಕ್ಕೆ ಸಮಸ್ಯೆಯಾಗುತ್ತದೆ. ಇದು ಜೀವಕ್ಕೆ ಅಪಾಯವಾಗಬಹುದು ಎಂದು ಹೇಳಲಾಗುತ್ತಿದೆ. ಅಧಿಕ ಬಿಪಿಯಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ. ತಜ್ಞರ ಪ್ರಕಾರ, ಈ ಋತುವಿನಲ್ಲಿ ರಕ್ತವು ದಪ್ಪವಾಗಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಹೆಪ್ಪುಗಟ್ಟುವಿಕೆ ಪ್ರಾರಂಭವಾಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

Share Post