ಬೀದರ್‌ನಲ್ಲಿ ರಾಜ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ; ಕೊರೆಯುವ ಚಳಿಗೆ ಜನ ಹೈರಾಣ
ಬೀದರ್; ರಾಜ್ಯದಲ್ಲಿ ಚಳಿಗೆ ಜನ ಹೈರಾಣಾಗುತ್ತಿದ್ದಾರೆ. ಅದ್ರಲ್ಲೂ ಬೀದರ್‌ನಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಬೀದರ್‌ನಲ್ಲಿ ಬೆಳಗ್ಗೆ ಹತ್ತು ಗಂಟೆಯಾದರೂ ಮಂಜು ಕವಿದ ವಾತಾವರಣ ಕಂಡುಬರುತ್ತಿದೆ. ಮನೆಯಿಂದ ಹೊರಗೆ ಬರಲು ಜನರಿಗೆ ಸಾಧ್ಯವಾಗುತ್ತಿಲ್ಲ.
ಬೀದರ್‌ನಲ್ಲಿ ಎರಡು ದಿನದ ಹಿಂದೆ 5.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ನಿನ್ನೆ 7.5 ಡಿಗ್ರಿ ತಾಪಮಾನ ದಾಖಲಾದ್ರೆ, ಇಂದು 7 ಡಿಗ್ರಿ ತಾಪಮಾನ ದಾಖಲಾಗಿದೆ. ಇದ್ರಿಂದಾಗಿ ಜನ ಬೆಳಗ್ಗೆ ವಾಕಿಂಗ್ ಹೋಗೋದಕ್ಕೂ ಸಾಧ್ಯವಾಗುತ್ತಿಲ್ಲ. ಎಲ್ಲರೂ ಸ್ವೆಟರ್, ಟೋಪಿ, ಮಪ್ಲರ್ ಮೊರೆ ಹೋಗುತ್ತಿದ್ದಾರೆ.