Districts

2ಡಿ ಮೀಸಲಾತಿ ತಿರಸ್ಕರಿಸಿದ ಪಂಚಮಸಾಲಿ ಸಮಾಜ; ಸರ್ಕಾರಕ್ಕೆ 24 ಗಂಟೆಗಳ ಗಡುವು

ಬೆಳಗಾವಿ:. ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಘೋಷಣೆ ಮಾಡಿದ್ದ 2ಡಿ ಮೀಸಲಾತಿಯನ್ನ ಸಮಾಜ ತಿರಸ್ಕರಿಸಿದ್ದು ಇದೀಗ ಮತ್ತೆ 2ಎ ಗೇ ಸೇರಿಸುವಂತೆ ಪಟ್ಟು ಹಿಡಿದಿದೆ.

ರಾಜ್ಯ ಸರ್ಕಾರ ಸಂಪುಟ ಒಪ್ಪಿಗೆ ಪಡೆದು 2ಡಿ ಮೀಸಲಾತಿ ಘೋಷಣೆ ಮಾಡಿದ ಬಳಿಕ ಸಮಾಜದ ಮುಖಂಡರು ಇಂದು ಬಸವ ಮೃತ್ಯುಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯ ಗಾಂಧಿ ಭವನದಲ್ಲಿ ಮಹತ್ವದ ಕಾರ್ಯಕಾರಿಣಿ ಸಭೆ ನಡೆಸಿದರು.

ಸಭೆ ಬಳಿಕ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಬಸವ ಮೃತ್ಯುಂಜಯ ಸ್ವಾಮೀಜಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಘೋಷಣೆ ಮಾಡಿರುವ 2ಡಿ ಮೀಸಲಾತಿಯನ್ನ ಸಮಾಜ ತಿರಸ್ಕರಿಸುತ್ತಿದೆ, 2ಡಿ ಯಲ್ಲಿ ಹಲವು ಗೊಂದಲಗಳಿವೆ, ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯವನ್ನ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ತಿಂಗಳು ಜನವರಿ 12 ರೊಳಗಾಗಿ ನಮಗೆ 2ಎ ಮೀಸಲಾತಿ ಘೋಷಣೆ ಮಾಡಬೇಕು, 2ಎ ಮೀಸಲಾತಿ ಕೊಡ್ತಿರೋ ಇಲ್ಲವೇ ಎಂಬುದನ್ನ 24 ಗಂಟೆಯಲ್ಲಿ ತಿಳಿಸಬೇಕು, ಒಂದು ವೇಳೆ 2ಎ ಮೀಸಲಾತಿ ಘೋಷಣೆ ಮಾಡದಿದ್ದರೆ, ಪಂಚಮಸಾಲಿ ಸಮಾಜ ಎಲ್ಲಾ ತೀರ್ಮಾನಕ್ಕೆ ಗಟ್ಟಿಯಾಗಿದೆ, 30 ರಿಂದ 40 ಸಾವಿರ ಜನರೊಂದಿಗೆ ಹಾವೇರಿಯಲ್ಲಿರುವ ಸಿ ಎಂ ಮನೆ ಮುಂದೆ ಒಂದು ದಿನದ ಉಗ್ರ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರಕ್ಕೆ ಮೀಸಲಾತಿ ವಿಚಾರ ತಲೆ ನೋವಾಗಿ ಪರಿಣಮಿಸಿದ್ದು ಸ್ವಲ್ಪ ವ್ಯತ್ಯಾಸವಾದ್ರೂ ಮುಂಬರುವ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಪೆಟ್ಟು ಬೀಳಲಿದೆ ಈ ನಿಟ್ಟಿನಲ್ಲಿ ಸರ್ಕಾರ ಜಾಣ ನಡೆಯನ್ನ ಅನುಸರಿಸಲು ಮುಂದಾಗಿದೆ.

Share Post