ಸರ್ಕಾರದ ವಿರುದ್ಧ ಪರಮೇಶ್ವರ್ ಚಾರ್ಜ್ಶೀಟ್; ಶೋಷಿತರಿಗೆ ಅನ್ಯಾಯ ಆರೋಪ
ಬೆಂಗಳೂರು; ಶೋಷಿತ ಸಮುದಾಯದ ಅಭಿವೃದ್ಧಿಗೆ ಇರುವ ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯನ್ನು ಬಿಜೆಪಿ ಸರ್ಕಾರ ಹಳ್ಳಹಿಡಿಸಿದೆ ಎಂದು ಮಾಜಿ ಸಚಿವ ಜಿ.ಪರಮೇಶ್ವರ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಶೋಷಿತ ಸಮುದಾಯಗಳ ಅಬಿವೃದ್ಧಿಗಾಗಿ ಸಮುದಾಯಗಳ ಜನಸಂಖ್ಯೆ ಆಧಾರದ ಮೇಲೆ ಯಾವುದೇ ಇಲಾಖೆಯ ಒಟ್ಟು ಬಜೆಟ್ ನಲ್ಲಿ ಶೇಕಡಾ 24.1ರಷ್ಟು ಶೋಷಿತ ವರ್ಗಗಳ ನೇರ ಅಭಿವೃದ್ಧಿಗೆ ಮೀಸಲಿಡಬೇಕೆಂಬ ಕ್ರಾಂತಿಕಾರಿ ಕಾರ್ಯಕ್ರಮವನ್ನು ರೂಪಿಸಿತ್ತು. ಆದ್ರೆ, ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಸೆಕ್ಷನ್ ೭ಡಿ ಅಡಿ ಡೀಮ್ಡ್ ವೆಚ್ಚದ ಹೆಸರಲ್ಲಿ ಯೋಜನೆಯ ಮೂಲ ಉದ್ದೇಶವನ್ನೇ ಹಳ್ಳ ಹಿಡಿಸಿದೆ ಎಂದು ಆರೋಪಿಸಿದ್ದಾರೆ.
ಒಂದೇ ವರ್ಷದಲಿ ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯಡಿ ಶೋಷಿತ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಒದಗಿಸಬೇಕಿದ್ದ ಹತ್ತು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬಿಜೆಪಿ ಸರ್ಕಾರ ತನಗಿಷ್ಟ ಬಂದಂತೆ ವ್ಯಯಿಸಿ ಯೋಜನೆಯನ್ನು ಹಳ್ಳ ಹಿಡಿಸಿ, ಶೋಷಿತ ವರ್ಗಗಳನ್ನು ಮತ್ತಷ್ಟು ಶೋಷಣೆಗೆ ದೂಡಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಶೋಷಿತ ಸಮುದಾಯಗಳ ಅಭಿವೃದ್ಧಿ ನಿಮಗಗಳನ್ನು ಅವ್ಯವಹಾರದ ನಿಗಮಗಳಾಗಿ ಬದಲಾವಣೆ ಮಾಡಲಾಗಿದೆ ಎಂದು ಪರಮೇಶ್ವರ್ ಪತ್ರಿಕಾ ಹೇಳಿಕೆಯಲ್ಲಿ ಆರೋಪ ಮಾಡಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯಲ್ಲಿ ನಿಯಮಾವಳಿಯನ್ನೇ ಬದಲಾಯಿಸಿರುವುದು, ಭೊವಿ ಅಭಿವೃದ್ಧಿ ನಿಗಮದಲ್ಲಿ ೧೩೦ ಕೋಟಿ ರೂಪಾಯಿ ಅವ್ಯವಹಾರವಾಗಿರುವುದು, ಬಂಜಾರಾ ನಿಗಮಕ್ಕೆ ಅನುದಾನವನ್ನೇ ನೀಡಿಲ್ಲ ಅಂತ ಪರಮೇಶ್ವರ್ ಆರೋಪ ಮಾಡಿದ್ದಾರೆ.