ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದರೆ ದಂಡ ಬೀಳಬಹುದು ಎಚ್ಚರ..!
ನವದೆಹಲಿ; ಆರ್ ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯ) ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರಿಗೆ ಹೊಸ ರೂಲ್ಸ್ ಜಾರಿ ಮಾಡಿದೆ. ಒಂದಕ್ಕಿಂದ ಹೆಚ್ಚು ಖಾತೆಗಳನ್ನು ಹೊಂದಿದವರಿಗೆ ಹೊಸ ಮಾರ್ಗ ಸೂಚಿಯನ್ನು ಆರ್ ಬಿಐ ಹೊರಡಿಸಿದೆ.
ಸಾಮಾನ್ಯವಾಗಿ ಎಲ್ಲರೂ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಆದರೆ ಕೆಲವರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುತ್ತಾರೆ. ಆದ್ರೆ ಕೆಲವು ಖಾತೆಗಳಲ್ಲಿ ವ್ಯವಹಾರ ನಡೆಸುತ್ತಿರುವುದಿಲ್ಲ. ಅಂತಹ ಖಾತೆಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.
ಆರ್ ಬಿಐ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದವರಿಗೆ ಹೊಸ ನಿಯಮವನ್ನು ಜಾರಿಗೆ ತರಲು ಯೋಜಿಸುತ್ತಿದೆ. ಗ್ರಾಹಕರಿಗೆ ಬ್ಯಾಂಕ್ ಗಳು ಖಾತೆಯನ್ನು ತೆರೆಯಲು ಯಾವುದೇ ಮಿತಿಯನ್ನು ನಿಗದಿ ಪಡಿಸಿಲ್ಲ. ಆದರೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಇಟ್ಟುಕೊಳ್ಳುದರಿಂದ ಗ್ರಾಹಕರು ಹಲವಾರು ಸಾಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಹೆಚ್ಚಿನ ಖಾತೆಗಳಿದ್ದರೆ ಅವುಗಳನ್ನು ಕ್ಲೋಸ್ ಮಾಡಿ ಎಂದು ಆರ್‌ಬಿಐ ಸೂಚಿಸಿದೆ.
ಗ್ರಾಹಕರು ಎಷ್ಟೇ ಬ್ಯಾಂಕ್ ಖಾತೆಯನ್ನು ಹೊಂದಿದ್ದರು ಕೂಡ ಮಿನಿಮಂ ಬ್ಯಾಲೆನ್ಸ್ ಅನ್ನು ಹೊಂದಿರಲೇಬೇಕು. ಹೀಗಾಗಿ ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಖಾತೆ ತೆರೆದಿದ್ದರೆ ನಿಮಗೆ ಇದರಿಂದಾಗಿ ಸಾಕಷ್ಟು ನಷ್ಟವಾಗುತ್ತದೆ. ಗ್ರಾಹಕರು ಒಂದು ವೇಳೆ ಖಾತೆ ತೆರೆಯುವ ಮುನ್ನ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದಿದ್ದರೆ ನೀವು ದಂಡ ಪಾವತಿಸಬೇಕಾಗುತ್ತದೆ.
ಕೆಲವು ಬ್ಯಾಂಕ್ ಗಳಲ್ಲಿ 5,000 ರೂ. ಇನ್ನು ಕೆಲವು ಬ್ಯಾಂಕ್ ಗಳಲ್ಲಿ 10,000 ರೂವರೆಗೆ ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಇದು ನಿಮ್ಮ CIBIL ಸ್ಕೋರ್ ಮೇಲು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.