ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಬ್ಲಾಸ್ಟ್; ಉಗ್ರರ ನಂಟಿದೆಯಾ..?
ಹಾಸನ; ಮಂಗಳೂರು ಕುಕ್ಕರ್ ಬ್ಲಾಸ್ಟ್ ಆಯ್ತು, ಈಗ ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ನಗರದ ಕೆ.ಅರ್ ಪುರಂನ ಸಬ್ ರಿಜಿಸ್ಟರ್ ಕಛೇರಿ ರಸ್ತೆಯಲ್ಲಿ ಘಟನೆ ನಡೆದಿದ್ದು, 2 ದಿನಗಳ ಹಿಂದೆ ನಗರದ ವ್ಯಕ್ತಿಯೊಬ್ಬರಿಗೆ ಕೊರಿಯರ್ ಮಾಲೀಕ ಮಿಕ್ಸಿ ಡಿಲವೆರಿ ಮಾಡಿದ್ದ ಎನ್ನಲಾಗಿದೆ, ಆದರೆ ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಅಂತ, ಮಿಕ್ಸಿಯನ್ನು ಕೊರೊಯರ್ ಕಚೇರಿಗೆ ವಾಪಸ್ ಮಾಡಲಾಗಿತ್ತಂತೆ. ವಾಪಸ್ ಪಡೆಯೋ ವೇಳೆ ಮಿಕ್ಸಿ ಆನ್ ಮಾಡಿ ಪರಿಶೀಲನೆ ನಡೆಸಿದ ಮಾಲೀಕ ಮಿಕ್ಸಿ ಆನ್ ಮಾಡುತ್ತಲೇ ಅದು ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ತೀವೃತೆಗೆ ಕೊರಿಯರ್ ಕಛೇರಿಯ ಗ್ಲಾಸ್ ಪುಡಿಪುಡಿಯಾಗಿ, ಗೋಡೆಗಳಿಗೆ ಹಾನಿಯಾಗಿದೆ. ಇದು ಶಂಕಾಸ್ಪದ ಬ್ಲಾಸ್ಟ್ ಎನ್ನಲಾಗುತ್ತಿದ್ದು, ಬ್ಲಾಸ್ಟ್ ನಿಂದ ಕೊರಿಯರ್ ಶಾಪ್ ಮಾಲೀಕ ಶಶಿ ಬಲಗೈಗೆ ಗಂಭೀರ ಗಾಯವಾಗಿದೆ. ಅಲ್ಲದೇ,
ಶಶಿಯ ಹೊಟ್ಟೆ, ತಲೆಯ ಭಾಗಕ್ಕೂ ಪೆಟ್ಟು ಬಿದ್ದಿದೆ. ಗಾಯಾಳು ಶಶಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.