ತೆಲುಗಿನ ಹಿರಿಯ ಪೋಷಕ ನಟ ಕೈಕಾಲ ಸತ್ಯನಾರಾಯಣ ಇನ್ನಿಲ್ಲ
ಹೈದರಾಬಾದ್; ತೆಲುಗಿನ ಹಿರಿಯ ಪೋಷಕ ನಟ ಕೈಕಾಲ ಸತ್ಯನಾರಾಯಣ ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್ ನ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಕೈಕಾಲ ಸತ್ಯನಾರಾಯಣ ಅವರಿಗೆ 87 ವರ್ಷ ವಯಸ್ಸಾಗಿತ್ತು. ತೆಲುಗು ಚಿತ್ರರಂಗದಲ್ಲಿ ಸುಮಾರು ಐದು ದಶಕಗಳ ಕಾಲ ಪೋಷಕ ನಟರಾಗಿ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲೂ ಅವರು ರಾಜ್ ಕುಮಾರ್ ನಟನೆಯ ಸ್ವರ್ಣಗೌರಿ ಚಿತ್ರದಲ್ಲಿ ಶಿವನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಕೈಕಾಲ ಸತ್ಯನಾರಾಯಣ 1935ರ ಜುಲೈ 25ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದರು. 1959ರಂದು ಅವರು ಚಿತ್ರರಂಗಕ್ಕೆ ಬಂದ ಅವರು, 1960ರಲ್ಲಿ ನಾಗೇಶ್ವರಮ್ಮ ಅವರನ್ನು ಮದುವೆ ಆದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ.
2019ರಲ್ಲಿ ತೆರೆಗೆ ಬಂದ ಮಹೇಶ್ ಬಾಬು ನಟನೆಯ ‘ಮಹರ್ಷಿ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಸತ್ಯನಾರಾಯಣ್ ಅವರು ಕಾಣಿಸಿಕೊಂಡಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ಇದಾದ ಬಳಿಕ ಅವರು ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ.