DistrictsPolitics

ಸಚಿವ ಸ್ಥಾನ ನೀಡಿದಿದ್ದಕ್ಕೆ ಬೇಸರ; ಅಧಿವೇಶನದಿಂದ ದೂರವುಳಿದ ಈಶ್ವರಪ್ಪ

ಬಾಗಲಕೋಟೆ; ನನ್ನನ್ನು ಸಂಪುಟಕ್ಕೆ ವಾಪಸ್‌ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಆದ್ರೆ ಅದು ನಡೆದಿಲ್ಲ. ಇದರಿಂದ ನನ್ನ ಅಭಿಮಾನಿಗಳು ಬೇಸರಗೊಂಡಿದ್ದಾರೆ. ನನಗೂ ಕೂಡಾ ಇದರಿಂದ ನೋವಾಗಿದೆ. ಹೀಗಾಗಿ, ಬೆಳಗಾವಿ ಅಧಿವೇಶನದಿಂದ ದೂರ ಉಳಿಯಲಿದ್ದೇನೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ವಿಚಾರ ತಿಳಿಸಿದ್ದರು.

ನನ್ನ ಅಭಿಮಾನಿಗಳು ನನಗೆ ಕರೆ ಮಾಡುತ್ತಿದ್ದಾರೆ. ನಿಮ್ಮನ್ಯಾಕೆ ಸಂಪುಟಕ್ಕೆ ವಾಪಸ್‌ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದಾಗಿ ನನಗೆ ವಾಮಾನ ಆದಂತಾಗಿದೆ. ಹೀಗಾಗಿ ಇದನ್ನು ನಮ್ಮ ನಾಯಕರಿಗೆ ಅರ್ಥ ಮಾಡಿಸಲು ಕಲಾಪಕ್ಕೆ ಹಾಜರಾಗದೇ ಸೌಜನ್ಯ ಪ್ರತಿಭಟನೆ ಮಾಡ್ತಿದ್ದೇನೆ ಅಂತ ಈಶ್ವರಪ್ಪ ಹೇಳಿದ್ದಾರೆ.

ಬೆಳಗಾವಿಗೆ ಹೋಗುತ್ತೇನೆ. ಆದ್ರೆ ಅಧಿವೇಶನದಲ್ಲಿ ಭಾಗಿಯಾಗೋದಿಲ್ಲ. ಸಭಾಧ್ಯಕ್ಷರಿಂದ ಅನುಮತಿ ಪಡೆಯಲು ಅಲ್ಲಿಗೆ ಹೋಗುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

 

Share Post