CrimeNational

ಪತ್ನಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಸಾಗಿಸಿದ ವೈದ್ಯ

ಲಕ್ನೋ; ಕೊಲ್ಲುವುದು, ಸೂಟ್‌ಕೇಸ್‌ನಲ್ಲಿ ತೆಗೆದುಕೊಂಡು ಹೋಗಿ ಸುಟ್ಟು ಹಾಕುವ ಘಟನೆಗಳ ಇತ್ತೀಚೆಗೆ ನಡೆಯುತ್ತಿವೆ. ಲಕ್ನೋದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ವೈದ್ಯನೊಬ್ಬ ತನ್ನ ಪತ್ನಿಯಯನ್ನು ಕೊಂದು, ಸೂಟ್‌ಕೇಸ್‌ನನ್ನು ಬಾಡಿಯನ್ನಿಟ್ಟುಕೊಂಡು 400 ಕಿಲೋ ಮೀಟರ್‌ ದೂರ ಸಾಗಿದ್ದಾನೆ. ಅನಂತರ ಆ ದೇಹವನ್ನು ಸುಟ್ಟು ಹಾಕಿದ್ದಾನೆ.

ಲಖಿಂಪುರ ಖೇರಿಯ ವಂದನಾ ಅವಸ್ತಿ ಎಂಬಾಕೆಯೇ ಕೊಲೆಯಾದ ಮಹಿಳೆ. ವಂದನಾ ಪತಿ ಅಭಿಷೇಕ್‌ ಆಯುರ್ವೇದ ವೈದ್ಯನಾಗಿದ್ದಾನೆ. ಅಭಿಷೇಕ್‌ ತನ್ನ ತಂದೆ ಜೊತೆ ಜಗಳ ಆಡುತ್ತಿದ್ದ. ಈ ವೇಳೆ ಪತ್ನಿ ಅಡ್ಡ ಬಂದಿದ್ದು, ಈ ವೇಳೆ ಭಾರದ ವಸ್ತುವಿನಿಂದ ತಲೆಗೆ ಹೊಡೆದಿದ್ದಾನೆ. ಇದ್ರಿಂದ ಗಂಭೀರವಾಗಿ ಗಾಯಗೊಂಡ ವಂದನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹೀಗಾಗಿ ಆತ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತೆಗೆದುಕೊಂಡು ಹೋಗಿ ಸುಟ್ಟುಹಾಕಿದ್ದ. ಈ ಸಂಬಂಧ ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

Share Post