CinemaNational

ರಜಿನಿಕಾಂತ್‌ಗೆ 72ನೇ ವರ್ಷದ ಹುಟ್ಟುಹಬ್ಬ; ಶುಭಾಶಯದ ಮಹಾಪೂರ

ಚೆನ್ನೈ; ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್​ ಗೆ ಇಂದು ಹುಟ್ಟುಹಬ್ಬ. ಅವರು ಇಂದು 72ನೇ ವರ್ಷದ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ರಜಿನಿ ಅಭಿಮಾನಿಗಳು ಇಂದು ತಮ್ಮ ನೆಚ್ಚಿನ ನಟನ ಬರ್ತ್‌ ಡೇ ಅನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ.
ಅವರ ಸಂಭ್ರಮವನ್ನು ಇಮ್ಮಡಿಗೊಳಿಸಲು ರಜನಿಕಾಂತ್​ ನಟನೆಯ ‘ಬಾಬಾ’ ಸಿನಿಮಾ ಮರು ಬಿಡುಗಡೆ ಮಾಡಲಾಗಿದೆ. ಚಿತ್ರಮಂದಿರದಲ್ಲಿ ಬಾಬಾ ಸಿನಿಮಾ ನೋಡುವ ಮೂಲಕ ತಲೈವಾ ಅಭಿಮಾನಿಗಳು ಎಂಜಾಯ್​ ಮಾಡುತ್ತಿದ್ದಾರೆ. ಆಪ್ತರು ಮತ್ತು ಸೆಲೆಬ್ರಿಟಿಗಳು ಕೂಡ ರಜನಿಕಾಂತ್​ ಬರ್ತ್​ಡೇಗೆ ಶುಭ ಕೋರುತ್ತಿದ್ದಾರೆ.

Share Post