ರಾಜ್ಯದಲ್ಲಿ ನಿರಂತರ ಮಳೆ ಹಿನ್ನೆಲೆ; 4 ದಿನ ಪಂಚರತ್ನ ಯಾತ್ರೆ ಮುಂದೂಡಿಕೆ
ಬೆಂಗಳೂರು; ಪಂಚರತ್ನ ಯಾತ್ರೆಗೆ ಮತ್ತೆ ಮಳೆ ಅಡ್ಡಿಯಾಗಿದೆ. ಈ ಮೊದಲು ಯಾತ್ರೆ ಶುರು ಮಾಡಿದ ದಿನವೇ ಮಳೆ ಕಾಡಿತ್ತು. ಹೀಗಾಗಿ ಮುಂದೂಡಲಾಗಿತ್ತು. ಎರಡನೇ ಬಾರಿ ಜೆಡಿಎಸ್ ಪಂಚರತ್ನ ಯಶಸ್ವಿಯಾಗಿ ಮುನ್ನಡೆದಿತ್ತು. ಆದ್ರೆ ಇದೀಗ ಮತ್ತೆ ಚಂಡಮಾರುತದಿಂದ ಮಳೆ ಬರುತ್ತಿದ್ದು, ಯಾತ್ರೆಯನ್ನು ನಾಲ್ಕು ದಿನ ಮುಂದೂಡಲಾಗಿದೆ. ಚಿಕ್ಕನಾಯಕನಹಳ್ಳಿಯಿಂದ ಮುಂದುವರೆಯವೇಕಾಗಿದ್ದ ಯಾತ್ರೆಯನ್ನು ನಾಲ್ಕು ದಿನ ಮುಂದೂಡಲಾಗಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಜೆಡಿಎಸ್ ಪ್ರಕಟಣೆ ಹೊರಡಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣಕ್ಕೆ ಪಂಚರತ್ನ ರಥಯಾತ್ರೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ.
ಡಿ.15ರಂದು ಮಾಗಡಿಯಲ್ಲಿ ರಥಯಾತ್ರೆ ಶುರುವಾಗಲಿದ್ದು, ಡಿಸೆಂಬರ್ 27ರಂದು ಮತ್ತೆ ತುಮಕೂರು ಜಿಲ್ಲೆಗೆ ರಥಯಾತ್ರೆ ಪ್ರವೇಶಿಸಲಿದೆ. ಡಿ.27ರಂದು ತುರುವೇಕೆರೆ, 28ಕ್ಕೆ ಚಿಕ್ಕನಾಯಕನಹಳ್ಳಿ, 29ಕ್ಕೆ ತುಮಕೂರು ಗ್ರಾಮಾಂತರ, 30ರಂದು ಕುಣಿಗಲ್ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ.