ಕರ್ನಾಟಕದ ಮೇಲೆ ಬಿಜೆಪಿ ಹೈಕಮಾಂಡ್ ಕಣ್ಣು; ಗರಿಗೆದರಿದ ರಾಜಕೀಯ
ಬೆಂಗಳೂರು; ಗುಜರಾತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮೇಲೆ ಬಿಜೆಪಿ ಫುಲ್ ಜೋಷ್ ಇಂದ ಕೆಲಸ ಮಾಡಲು ಶುರು ಮಾಡಿದೆ. ಕರ್ನಾಟಕ ಬಿಜೆಪಿಯಲ್ಲೂ ಹೊಸ ಚೈತನ್ಯ ಬಂದಿದೆ. ಕರ್ನಾಟಕದಲ್ಲೂ ಭರ್ಜರಿಯಾಗಿ ಗೆಲುವು ಸಾಧಿಸಲು ಈಗಾಗಲೇ ರಣತಂತ್ರ ಹೆಣೆಯಲಾಗುತ್ತಿದೆ. ಗುಜರಾತ್ ಚುನಾವಣೆಯ ಭರ್ಜರಿ ಗೆಲುವು ಕರ್ನಾಟಕದಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ನಂಬಲಾಗಿದೆ.
ಇನ್ನು ಗುಜರಾತ್ನಲ್ಲಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಯುವ ಸಮುದಾಯಕ್ಕೆ ಹಾಗು ಮಹಿಳೆಯರಿಗೆ ಟಿಕೆಟ್ ನೀಡಲಾಗಿತ್ತು. ಇದ್ರಿಂದಾಗಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲೂ ಇದೇ ತಂತ್ರ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲೂ ವಯಸ್ಸಾದ ನಾಯಕರು, ಸರಿಯಾದ ಕೆಲಸ ಮಾಡದ ಶಾಸಕರಿಗೆ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಇನ್ನೊಂದೆಡೆ ಶೀಘ್ರದಲ್ಲೇ ಬಿಜೆಪಿ ಹೈಕಮಾಂಡ್ ನಾಯಕರು ಕರ್ನಾಟಕಕ್ಕೆ ಬರಲಿದ್ದಾರೆ. ಪ್ರಧಾನಿ ಮೋದಿ ಕೂಡಾ ರಾಜ್ಯದಲ್ಲಿ ಹಲವು ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಆರ್ಎಸ್ಎಸ್ ನಾಯಕರು ಕೂಡಾ ಅಲರ್ಟ್ ಆಗಿದ್ದು, ಇವತ್ತು ಆರ್ಎಸ್ಎಸ್ ನಾಯಕರು ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.