BengaluruCrime

ಶಿವಮೊಗ್ಗದಲ್ಲಿ ನಿಷೇಧಿತ ಪಿಎಫ್‌ಐ ಪೋಸ್ಟರ್‌; ತಪ್ಪಿತಸ್ಥರ ವಿರುದ್ಧ ಕ್ರಮ – ಸಿಎಂ

ಬೆಂಗಳೂರು; ಶಿವಮೊಗ್ಗದಲ್ಲಿ ನಿಷೇಧಿತ ಪಿಎಫ್‌ಐ ಪೋಸ್ಟರ್‌ಗಳನ್ನು ಅಂಟಿಸಿದ್ದು, ಪಿಎಫ್‌ಐ ಸೇರುವಂತೆ ಅದ್ರಲ್ಲಿ ಬರೆಯಲಾಗಿದೆ. ಹೀಗೆ ಪೋಸ್ಟರ್‌ ಅಂಟಿಸಿದವರ ವಿರುದ್ಧ ಪೊಲೀಸರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಪಿಎಫ್‌ಐ ರದ್ದು ಮಾಡಿದ ನಂತರ ಹತಾಶರಾಗಿ ಈ ರೀತಿ ಗೋಡೆ ಮೇಲೆ ಬರೆಯುವ ಕೆಲ ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

Share Post