Districts

ಹನುಮ ಜಯಂತಿ ಹಿನ್ನೆಲೆ; ಪೊಲೀಸ್ ಕಣ್ಗಾವಲು

ಮೈಸೂರು; ಹನುಮ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಹುಣಸೂರಿನಲ್ಲಿ ಪೋಲೀಸರ ತೀವ್ರ ಕಣ್ಗಾವಲು ಇಟ್ಟಿದ್ದಾರೆ. ನೂರಾರು ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದ್ದು, ಪೊಲೀಸರು ಪಥ ಸಂಚಲನ ನಡೆಸಿದ್ದಾರೆ.

ಜಿಲ್ಲಾ ಎಸ್ಪಿ ಆರ್ ಚೇತನ್ ನೇತೃತ್ವದಲ್ಲಿ ಪಟ್ಟಣದ ವಿವಿದೆಡೆ ಪಥ ಸಂಚಲನ ನಡೆಸಲಾಯಿತು. ಹುಣಸೂರು ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ.

ಪೊಲೀಸರು ಈಗಾಗಲೇ ಎಲ್ಲಾ ಸಮುದಾಯಗಳ ಪ್ರಮುಖರ ಜೊತೆ ಶಾಂತಿ ಸಭೆ ನಡೆಸಿದ್ದಾರೆ. ಹನುಮ ಜಯಂತಿ ಮೆರವಣಿಗೆ ಹೊರಡುವ ವೇಳೆ ಅಹಿತಕರ ಘಟನೆ ಜರುಗದಂತೆ ಪೋಲೀಸರ ಕ್ರಮ ವಹಿಸಿದ್ದಾರೆ.

 

Share Post