Bengaluru

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆಯ ಸಿಂಚನ; ಸಿಲಿಕಾನ್‌ ಸಿಟಿ ಕೂಲ್‌ ಕೂಲ್‌

ಬೆಂಗಳೂರು; ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಜಡಿ ಮಳೆ ಹಿಡಿದುಕೊಂಡಿದೆ. ಸಿಲಿಕಾನ್‌ ಸಿಟಿ ಫುಲ್‌ ಕೂಲ್‌ ಕೂಲ್‌ ಆಗಿದೆ. ಕಳೆದ ಕೆಲ ದಿನಗಳಿಂದ ವಿಪರೀತ ಚಳಿ ಇತ್ತು. ಇದೀಗ ಮಳೆಯಿಂದಾಗಿ ಬೆಂಗಳೂರು ಮತ್ತಷ್ಟು ತಣ್ಣಗಾಗಿದೆ. ಬೆಳಗ್ಗೆ ಎದ್ದು ಕೆಲಸಕ್ಕೆ ತೆರಳುವವರು ಕೊಂಚ ಕಿರಿಕಿರಿ ಅನುಭವಿಸಿದರು. ಕೊಡೆಗಳು, ಸ್ವೆಂಟರ್‌ಗಳು, ಜರ್ಕಿನ್‌ಗಳು ಹೊರಬಂದಿವೆ.

ವಾಹನ ಸವಾರರಿಗೂ ಮಳೆಯಿಂದಾಗಿ ತೊಂದರೆ ಆಗಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ 48 ಗಂಟೆ ಕಾಲ ಇದೇ ವಾತಾವರಣ ಮುಂದುವರೆಯಲಿದೆ.

Share Post