ಮತಾಂತರಕ್ಕೆ ಒಪ್ಪದ ಪತ್ನಿ ಕೊಲೆಗೆ ಯತ್ನ; ಗಂಡನ ವಿರುದ್ಧ ದೂರು ದಾಖಲು
ಚಿತ್ರದುರ್ಗ; ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಮತಾತಂತರಕ್ಕೆ ವಿರೋದ ವ್ಯಕ್ತಪಡಿಸುತ್ತಿದ್ದಾಳೆಂದು ಪತಿ ಆಕೆಯ ಕೊಲೆ ಯತ್ನಿಸಿದ್ದಾನೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳೆ ಚಿತ್ರದುರ್ಗ ಪೊಲೀಸರಿಗೆ ದೂರು ನೀಡಿದ್ದಾಳೆ. ಉಮಾ ಎಂಬ ಮಹಿಳೆ ತನ್ನ ಗಂಡ ಅಬ್ದುಲ್ ಖಾದರ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗ ಮೂಲದ ಉಮಾ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಬ್ದುಲ್ ಖಾದರ್ ಪರಿಚಯವಾಗಿದೆ. ಅದು ಪ್ರೀತಿಯಾಗಿ ಬದಲಾಗಿದ್ದು, ಇಬ್ಬರೂ ವಿವಾಹ ಕೂಡಾ ಆಗಿದ್ದಾರೆ. ಆದ್ರೆ ವಿವಾಹ ಆದ ನಂತರ ಅಬ್ದುಲ್ ಖಾದರ್ ವರಸೆ ಬದಲಾಗಿದೆ. ಇಸ್ಲಾಂಗೆ ಮತಾಂತರ ಆಗುವಂತೆ ಉಮಾರನ್ನು ಒತ್ತಾಯಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೊಲೆ ಯತ್ನ ಮಾಡಿದ್ದಾನೆ ಎಂದು ಗಂಡನ ವಿರುದ್ಧ ಉಮಾ ಆರೋಪ ಮಾಡಿದ್ದಾಳೆ.
ಹಲ್ಲೆಗೊಳಗಾಗಿರುವ ಉಮಾ ಸದ್ಯ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.