ಕರಾವಳಿಯಲ್ಲಿ ಒಬಿಸಿ ಸಮಾವೇಶಕ್ಕೆ ಕಾಂಗ್ರೆಸ್ ಚಿಂತನೆ; ಹರಿಪ್ರಸಾದ್ ಪ್ಲ್ಯಾನ್ ಏನು..?
ಬೆಂಗಳೂರು; ಹಲವಾರು ಕಾರಣಗಳಿಂದ ಕರಾವಳಿಯಲ್ಲಿ ಕೊಂಚ ಬಿಜೆಪಿ ಬಗ್ಗೆ ಅಸಮಾಧಾನ ಇದೆ. ಇದನ್ನು ಎನ್ಕ್ಯಾಶ್ ಮಾಡಿಕೊಳ್ಳೋದಕ್ಕೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಅದಕ್ಕಾಗಿ ಕರಾವಳಿ ಒಬಿಸಿ ಸಮಾವೇಶ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಈ ಬಗ್ಗೆ ಚಿಂತನೆ ನಡೆಸಿದ್ದು, ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕರಾವಳಿಯಲ್ಲಿ ಒಬಿಸಿ ಹಾಗೂ ಮುಸ್ಲಿಂ ಸಮಯದಾಯದ ಜನ ಹೆಚ್ಚಿದ್ದಾರೆ. ಅದ್ರಲ್ಲೂ ಒಬಿಸಿಗೆ ಸೇರುವ ಬಿಲ್ಲವ ಸಮಯದಾಯದ ಮತಗಳು ಬಹುತೇಕ ಕರಾವಳಿಯ ಎಲ್ಲಾ ಕ್ಷೇತ್ರಗಳ ಭವಿಷ್ಯವನ್ನು ನಿರ್ಧಾರ ಮಾಡುತ್ತವೆ. ಬಿಲ್ಲವ ಸಮುದಾಯದವರು ಕಳೆದ ಕೆಲ ದಶಕಗಳಿಂದ ಬಿಜೆಪಿಗೆ ಮಣೆ ಹಾಕುತ್ತಾ ಬಂದಿದ್ದಾರೆ. ಆದ್ರೆ ಇತ್ತೀಚೆಗೆ ಕೆಲ ಅಸಮಾಧಾನಗಳಿವೆ. ಹೀಗಾಗಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಕಾಂಗ್ರೆಸ್ ತಯಾರಿ ನಡೆಸಿದೆ. ಬಿ.ಕೆ.ಹರಿಪ್ರಸಾದ್ ಕೂಡಾ ಅದೇ ಪಂಗಡದವರೇ ಆಗಿದ್ದಾರೆ. ಹೀಗಾಗಿ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಿ ಆ ಮೂಲಕ ಒಬಿಸಿ ಸಮುದಾಯಗಳನ್ನು ಒಗ್ಗೂಡಿಸುವ, ಕಾಂಗ್ರೆಸ್ ಮತ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳಲು ಭಾರಿ ಚಿಂತನೆ ನಡೆದಿದೆ ಎನ್ನಲಾಗಿದೆ. ಇದರ ಜೊತೆಗೆ ಮಂಗಳೂರಿನಿಂದ ಬೆಂಗಳೂರಿಗೆ ಪದಯಾತ್ರೆ ಕೂಡಾ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.