BengaluruCrime

ರ್ಯಾಪಿಡೋ ಟ್ಯಾಕ್ಸಿ ಚಾಲಕನಿಂದ ಮಾಡೆಲ್‌ಗೆ ಕಿರುಕುಳ

ಬೆಂಗಳೂರು; ಟ್ಯಾಕ್ಸಿ ಚಾಲಕರು ರಾತ್ರಿ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರುವ ಘಟನೆಗಳು ಬೆಂಗಳೂರಿನಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಕಾನೂನುಗಳು ಎಷ್ಟೇ ಬಿಗಿಯಾದರೂ ಇಂತಹ ಕೃತ್ಯಗಳ ನಿಲ್ಲುತ್ತಿಲ್ಲ. ಕಳೆದ ರಾತ್ರಿ ಕೂಡಾ ಇಂತಹದ್ದೇ ಒಂದು ಘಟನೆ ನಡೆದಿದೆ. ಮಾಡೆಲ್‌ ಒಬ್ಬರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಟ್ಯಾಕ್ಸಿ ಚಾಲಕ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಈ ಬಗ್ಗೆ ಮಾಡೆಲ್‌ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟಿ ಹಾಗೂ ಮಾಡೆಲ್‌ ಸುಜೀತಾ ಕೆಲಸ ಮಾಡುತ್ತಿದ್ದ ಯುವತಿ ರಾತ್ರಿ ಕೆಲಸ ಮುಗಿಸಿ ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ಟ್ಯಾಕ್ಸಿ ಬುಕ್‌ ಮಾಡಿದ್ದರು. ಟ್ಯಾಕ್ಸಿ ಚಾಲಕ ಆಕೆಯನ್ನು ಪಿಕ್‌ ಮಾಡಿದ್ದು, ಅರ್ಧ ದಾರಿಯಲ್ಲಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಸುಜೀತಾ ಆತನಿಂದ ತಪ್ಪಿಸಿಕೊಂಡಿದ್ದಾಳೆ. ಈ ಬಗ್ಗೆ ಆಕೆ ರ್ಯಾಪಿಡೋ ಕಂಪನಿಗೂ ದೂರು ಕೊಟ್ಟಿದ್ದು, ಪೊಲೀಸ್‌ ಠಾಣೆಯಲ್ಲೂ ಎಫ್‌ಐಆರ್‌ ದಾಖಲಿಸಿದ್ದಾರೆ. ಮಂಜಯನಾಥ್‌ ತಿಪ್ಪೇಸ್ವಾಮಿ ಎಂಬ ಚಾಲಕನೇ ಈ ಕೆಲಸ ಮಾಡಿದವನು ಎಂದು ತಿಳಿದುಬಂದಿದೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post