CinemaNational

ಚಿತ್ರರಂಗದಿಂದ ದೂರವಿರ್ತಾರಂತೆ ಆಮೀರ್‌ ಖಾನ್‌; ಏನು ಕಾರಣ ಗೊತ್ತಾ..?

ಮುಂಬೈ; ಬಾಲಿವುಡ್‌ ಖಾನ್‌ತ್ರಯರಲ್ಲಿ ಒಬ್ಬರಾದ ಆಮೀರ್‌ ಖಾನ್‌ ಚಿತ್ರರಂಗದಿಂದ ಸ್ವಲ್ಪ ದಿನ ದೂರವಿರುತ್ತಾರಂತೆ. ಸ್ವಲ್ಪ ದಿನ ಚಿತ್ರರಂಗದಿಂದ ದೂರವಿದ್ದು ಕುಟುಂಬದ ಜೊತೆ ಕಾಲ ಕಳೆಯಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಲಾಲ್‌ ಸಿಂಗ್‌ ಚಡ್ಡಾ ಸಿನಿಮಾ ಬಗ್ಗೆ ಆಮೀರ್‌ ಖಾನ್‌ ದೊಡ್ಡ ಕನಸು ಕಂಡಿದ್ದರು. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಯಶಸ್ವಿಯಾಗುತ್ತದೆ ಎಂದುಕೊಂಡಿದ್ದರು. ಆದ್ರೆ, ಅದು ಯಶಸ್ಸು ಕಾಣಲಿಲ್ಲ. ಹೀಗಾಗಿ ಆಮೀರ್‌ ಖಾನ್‌ ತುಂಬಾನೇ ನಿರಾಸೆಯಾಗಿದ್ದಾರೆ. ಈ ಸೋಲು ಅವರನ್ನು ನಿದ್ದೆಗೆಡಿಸಿದೆಯಂತೆ. ಹೀಗಾಗಿ ಅವರು ಸ್ವಲ್ಪ ದಿನ ಚಿತ್ರರಂಗದಿಂದಲೇ ದೂರ ಉಳಿಯಲು ನಿರ್ಧರಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಆಮೀರ್‌ ಖಾನ್‌ ಈ ಮಾತುಗಳನ್ನಾಡಿದ್ದಾರೆ.

Share Post