Bengaluru

ಹನ್ನೊಂದು ಐಪಿಎಸ್‌ ಅಧಿಕಾರಿಗಳ ವರ್ಗಾವಣೆ; ನಾಲ್ವರಿಗೆ ಸಿಕ್ತು ಬಡ್ತಿ

ಬೆಂಗಳೂರು; 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲಿ ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರೆ, ಉಳಿದ ನಾಲ್ಕು ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.

ಸ್ಪೆಷಲ್ ಟ್ರಾಫಿಕ್ ಕಮಿಷನರ್ ಹುದ್ದೆಯನ್ನು ಹೊಸದಾಗಿ ಸೃಷ್ಟಿ ಮಾಡಲಾಗಿದ್ದು, ಅದಕ್ಕೆ ಎಂ.ಎ.ಸಲೀಂ ಅವರನ್ನು ನೇಮಿಸಲಾಗಿದೆ. ರಮೇಶ್ ಬಾನೋತ್ ಅವರನ್ನು ಮೈಸೂರು ಪೊಲೀಸ್‌ ಕಮಿಷನರ್ ಆಗಿ ವರ್ಗಾಯಿಸಲಾಗಿದೆ. ಸಿಐಡಿ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಉಮೇಶ್ ಕುಮಾರ್ ಅವ್ರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ. ರವಿ.ಡಿ. ಚನ್ನಣ್ಣನವರ್ ರನ್ನು ಕಿಯೋನಿಕ್ಸ್ ಎಂಡಿಯಾಗಿ ನೇಮಿಸಲಾಗಿದ್ದು, ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿದ್ದ ದಿವ್ಯಜ್ಯೋತಿ ರೇ ಐಜಿಪಿಯಾಗಿ ಕುಂದುಕೊರತೆಗಳು ಮತ್ತು ಮಾನಹ ಹಕ್ಕುಗಳ ಇಲಾಖೆಗೆ ವರ್ಗವಾಗಿದ್ದಾರೆ. ರವಿಕಾಂತೇಗೌಡರನ್ನು ಸಿಐಡಿ ವಿಭಾಗದ ಡಿಐಜಿಯಾಗಿ ವರ್ಗಾವಣೆಗೊಳಿಸಲಾಗಿದೆ.

Share Post