CinemaNational

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಬಿಪಾಶಾ

ಮುಂಬೈ; ಬಾಲಿವುಡ್‌ ನಟಿ ಬಿಪಾಶಾ ಬಸು ತಾಯಿ ಆಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ ಬಿಪಾಶಾ ನಾಲ್ಕೈದು ಬಾರಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಸಂಭ್ರಮಿಸಿದ್ದರು.

2016ರ ಏಪ್ರಿಲ್‌ 30 ರಂದು ಬಿಪಾಶಾ ಮದುವೆಯಾಗಿದ್ದರು. ಆಗಸ್ಟ್ ನಲ್ಲಿ ಗರ್ಭಿಣಿಯಾಗಿರುವುದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದರು. ಬಿಪಾಶಾಗೆ ಮಗುವಾಗುತ್ತಿದ್ದಂತೆಯೇ ಅವರ ಆಪ್ತರು, ಸ್ನೇಹಿತರು ಹಾಗೂ ಸಂಬಂಧಿಕರು ಶುಭಾಶಯಗಳನ್ನು ಕೋರುತ್ತಿದ್ದಾರೆ.

Share Post