National

ದೇವಸ್ಥಾನಕ್ಕೆ ನೀರು ನುಗ್ಗಿದೆ-ಮದುವೆಯಾಗಬೇಕು, ನೀರು ಖಾಲಿ ಮಾಡಿಸಿ; ವಧು-ವರರ ಮನವಿ

ಚೆನ್ನೈ; ತಮಿಳುನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದ್ರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಮದುವೆಗಳೂ ಮಾಡಲಾಗದಷ್ಟು. ಹೌದು, ದೇವಸ್ಥಾನವೊಂದರಲ್ಲಿ ಇಂದು ಮದುವೆ ನಡೆಯಬೇಕಿತ್ತು. ಆದ್ರೆ ರಾತ್ರಿ ಸುರಿದ ಮಳೆಯಿಂದಾಗಿ ದೇವಸ್ಥಾನದೊಳಗೆ ನೀರು ನುಗ್ಗಿದೆ. ಹೀಗಾಗಿ ವಧು-ವರರು ನೀರು ಖಾಲಿ ಮಾಡಿಸಿ ಮದುವೆಯಾಗುವುದಕ್ಕೆ ಅನುಕೂಲ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಪುಲಿಯನ್‌ತೋಪ್‌ನ ಆಂಜಿನೇಯರ್ ದೇವಸ್ಥಾನದಲ್ಲಿ ನಡೆಯಬೇಕಿದ್ದ 5 ಮದುವೆಗಳು ಮಳೆಯ ಕಾರಣದಿಂದಾಗಿ ವಿಳಂಬವಾಗಿ ನಡೆದಿವೆ. ಗುರುವಾರ ರಾತ್ರಿ ಭಾರೀ ಮಳೆಯ ನಡುವೆಯೂ ದೇವಸ್ಥಾನಕ್ಕೆ ನವ ಜೋಡಿಗಳು ಆಗಮಿಸಿದ್ದರು. ಅಲ್ಲಿ ನೀರು ನಿಂತಿದ್ದರೂ ನೀರಿನ ನಡುವೆಯೇ ಮದುವೆಯಾಗಿದ್ದಾರೆ.

Share Post