ಇಂದು ರಾಹುಗ್ರಸ್ತ ಚಂದ್ರಗ್ರಹಣ; ಕೆಂಪಾಗಿ ಕಾಣಲಿದ್ದಾನೆ ಚಂದಿರ
ಬೆಂಗಳೂರು; ಇಂದು ಸಂಜೆ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದ್ದು, ವರ್ಷದ ಕೊನೆಯ ಗ್ರಹಣದ ಬಗ್ಗೆ ಎಲ್ಲರಲ್ಲೂ ಕುತೂಹಲ ಶುರುವಾಗಿದೆ. ಈ ಚಂದ್ರ ಗ್ರಹಣವನ್ನು ರಕ್ತ ಚಂದ್ರ ಗ್ರಹಣ ಅಂತ ಕರೆಯುತ್ತಾರೆ. ಗ್ರಹಣ ಹಿನ್ನೆಲೆಯಲ್ಲಿ ನಾಡಿನ ಬಹುತೇಕ ದೇವಾಲಯಗಳು ಮುಚ್ಚಿರಲಿವೆ.
ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಚಂದ್ರಗ್ರಹಣ ಶುರುವಾಗಲಿದ್ದು, ಸಂಜೆ 4 ಗಂಟೆ 28 ನಿಮಿಷಕ್ಕೆ ಗ್ರಹಣ ಮಧ್ಯಕಾಲ ತಲುಪಲಿದೆ. ಸಂಜೆ 6 ಗಂಟೆ 17 ನಿಮಿಷಕ್ಕೆ ಚಂದ್ರಗ್ರಹಣ ಕೊನೆಯಾಗಲಿದೆ. ನಮ್ಮ ರಾಜ್ಯದಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರವಾಗಲಿದೆ. ಚಂದ್ರ ಗ್ರಹಣದ ಸಮಯದಲ್ಲಿ ದೇಗುಲಗಳನ್ನು ಬಂದ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಸೂರ್ಯಗ್ರಹಣ ಸಂಭವಿಸಿತ್ತು. ಇಂದು ಬಾನಂಗಳದಲ್ಲಿ ಚಂದ್ರ ಗ್ರಹಣವಾಗಲಿದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಅಡ್ಡ ಬರುವುದರಿಂದ, ಈ ಹೊತ್ತಲ್ಲಿ ಚಂದ್ರ ಮರೆಯಾಗಲಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬೀಳಲಿದೆ. ಈ ಕಾರಣದಿಂದ ಚಂದ್ರ ಕೆಂಪಾಗಿ ಕಾಣಲಿದ್ದಾನೆ.