CrimeDistricts

ಶಿರಾಳಕೊಪ್ಪ ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ಮೂವರ ದುರ್ಮರಣ

ಶಿವಮೊಗ್ಗ; ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಕಾರು ಹಾಗೂ ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ.

ಶಿರಾಳಕೊಪ್ಪ ಸಮೀಪದ ಮಂಚಿನಕೊಪ್ಪ ಬಳಿ ಈ ದುರಂತ ನಡೆದಿದ್ದು, ಹಲುಗಿನಕೊಪ್ಪ ಗ್ರಾಮದ್ ಜ್ಯೋತಿ, ಗಂಗಮ್ಮ, ಸೌಜನ್ಯ ಸಾವನ್ನಪ್ಪಿದ್ದಾರೆ. ಮಲ್ಲಿಕಾರ್ಜುನ ಎಂಬುವವರು ಬೈಕ್‌ ಓಡಿಸುತ್ತಿದ್ದು, ನಾಲ್ವರು ಒಂದೇ ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಮಲ್ಲಿಕಾರ್ಜುನ ಅವರು ಬದುಕಿಳಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರು ಹೀರೆಕೆರೂರಿನಿಂದ ಶಿರಾಳಕೊಪ್ಪಕ್ಕೆ ಬರುತ್ತಿತ್ತು. ಸೌಜನ್ಯ ಸ್ಥಳದಲ್ಲೇ ಸಾವನ್ನಪ್ಪಿದರೆ ಮಲ್ಲಿಕಾರ್ಜುನ, ಜ್ಯೋತಿ, ಗಂಗಮ್ಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಗಂಗಮ್ಮ ಹಾಗೂ ಜ್ಯೋತಿ ಸಾವನ್ನಪ್ಪಿದ್ದಾರೆ. ಮಲ್ಲಿಕಾರ್ಜುನ ಅವರ ಸ್ಥಿತಿಯೂ ಗಂಭಿರವಾಗಿದೆ ಎಂದು ತಿಳಿದುಬಂದಿದೆ.

Share Post